ಕಾಸರಗೋಡು: ನಷ್ಟದ ಹಾದಿಯಲ್ಲಿರುವ ಕೇರಳ ರಸ್ತೆ ಸಾರಿಗೆ ನಿಗಮವನ್ನು ಲಾಭದ ಕಡೆಗೆ ಕೊಂಡೊಯ್ಯಲು ಹಲವು ಶ್ರಮ ನಡೆಯುತ್ತಿರುವ ಮಧ್ಯೆ ಕಾಸರಗೋಡಿನ ಕೆಎಸ್ಸಾರ್ಟಿಸಿ ಡಿಪೋ ಆಶಾದಾಯಕ ಪ್ರಯತ್ನವೊಂದಕ್ಕೆ ಕೈಯಿಕ್ಕಿದೆ.
ಡಿಪೋದ ಹಳೇಯ ಸಂಚಾರ ಸ್ಥಗಿತಗೊಳಿಸಿರುವ ಬಸ್ಸನ್ನು ಸರ್ಕಾರಿ ಸವಾಮ್ಯದ 'ಮಿಲ್ಮಾ'ಹಾಲು ಹಾಗೂ ಹಾಲಿನ ಇತರ ಉತ್ಪನ್ನಗಳ ಮಾರಾಟಕ್ಕಾಗಿ ಸಜ್ಜುಗೊಳಿಸಲಾಗಿದೆ. ರಸ್ತೆಬದಿ ನಿಲುಗಡೆಗೊಳಿಸಿರುವ ಈ ಬಸ್ಸನ್ನು ಮಿಲ್ಮಾ ಬೂತ್ ಆಗಿ ಬದಲಾಯಿಸಲಾಗಿದ್ದು, ಸುಂದರವಾಗಿ ಬಣ್ಣ ಬಳಿದು ಆಕರ್ಷಣೆಯ ಕೇಂದ್ರವಾಗಿ ಮಾರ್ಪಾಡುಗೊಳಿಸಲಾಗಿದೆ. ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಾಂಪ್ಲೆಕ್ಸ್‍ನ ಹಿಂಭಾಗದ ದ್ವಾರದ ಬಳಿ ಈ ಬಸ್ಸನ್ನು ಸಜ್ಜುಗೊಳಿಸಿ ಇರಿಸಲಾಗಿದೆ.
ತಿರುವನಂತಪುರ, ಕೋಯಿಕ್ಕೋಡ್, ಕಣ್ಣೂರು ಸೇರಿದಂತೆ ಹಲವೆಡೆ ಇಂತಹ ಬಸ್‍ಗಳನ್ನು ವಿವಿಧ ಬಳಕೆಗಾಗಿ ಬಳಸಲಾಗುತ್ತಿದೆ. ತಿರುವನಂತಪುರ ಕೇಂದ್ರ ಬಸ್ ನಿಲ್ದಾಣ ವಠಾರದಲ್ಲಿ ಕುಟುಂಬಶ್ರೀ ಘಟಕದ ಕ್ಯಾಂಟೀನ್ ನಡೆಸಲು ಇಂತಹ ಬಸ್ಸನ್ನು ಉಪಯೋಗಿಸಲಾಗುತ್ತಿದೆ.
ಸಾಮಾನ್ಯವಾಗಿ ಮಿಲ್ಮಾ ಬೂತ್‍ಗಳಲ್ಲಿ ಲಭ್ಯವಾಗುವಂತೆ ಕಾಸರಗೋಡಿನ ಕೆಎಸ್ಸಾರ್ಟಿಸಿ ಬೂತ್‍ನಲ್ಲಿ ಮಿಲ್ಮಾದ ವಿವಿಧ ಉತ್ಪನ್ನಗಳ ಜತೆಗೆ ಚಹಾ ಹಾಗೂ ಲಘು ಉಪಹಾರ ವಿತರಣೆಯೂ ನಡೆಯಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
'ಮಿಲ್ಮಾ'ಬೂತ್ ಆಗಿ ಪರಿವರ್ತನೆಗೊಂಡ ಕೆಎಸ್ಸಾರ್ಟಿಸಿ ಹಳೇ ಬಸ್: ಕಾಸರಗೋಡಿನಲ್ಲಿ ಸೇವೆಗೆ ಸಿದ್ಧ
0
ಸೆಪ್ಟೆಂಬರ್ 04, 2022
Tags