ನವದೆಹಲಿ: ಭಾರತ ಮತ್ತು ಚೀನಾ ಪೂರ್ವ ಲಡಾಖ್‌ನ ಪ್ರಮುಖ ಸಂಘರ್ಷ ಪ್ರದೇಶವಾದ ಗೋಗ್ರಾ- ಹಾಟ್ ಸ್ಪ್ರಿಂಗ್ಸ್‌ನಿಂದ ತಮ್ಮ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಗುರುವಾರ ಆರಂಭಿಸಿವೆ.
“ಸೆಪ್ಟೆಂಬರ್ 8, 2022 ರಂದು ನಡೆದ 16ನೇ ಸುತ್ತಿನ ಭಾರತ - ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯಲ್ಲಿ ಸಹಮತ ವ್ಯಕ್ತವಾದ ಬಳಿಕ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್ (ಪೆಟ್ರೋಲಿಂಗ್ ಪಾಯಿಂಟ್ -15) ಪ್ರದೇಶದಿಂದ ಭಾರತ ಮತ್ತು ಚೀನಾ ತಮ್ಮ ತಮ್ಮ ಸೇನೆಯನ್ನು ಹಿಂಪಡೆಯಲು ಆರಂಭಿಸಿವೆ. ಇದು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಅನುಕೂಲಕರವಾಗಿದೆ ಎಂದು ಉಭಯ ದೇಶಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ.
ಗಡಿಯಲ್ಲಿನ ಬಿಕ್ಕಟ್ಟನ್ನ ಶಮನ ಮಾಡಲು ಸೇನಾ ಅಧಿಕಾರಿಗಳ ಮಟ್ಟದಲ್ಲಿ ಬರೋಬ್ಬರಿ 15 ಬಾರಿ ಸಭೆಗಳು ನಡೆದಿದ್ದವು. ಸಭೆಯಲ್ಲಿ ಮಾಡಿಕೊಂಡ ಒಪ್ಪಂದಂತೆ ಭಾರತ ಹಾಗೂ ಚೀನಾ ಗೋಗ್ರಾ ಗಡಿಯಿಂದ ಸಂಪೂರ್ಣ ಹಿಂದೆ ಸರಿದಿವೆ. 16ನೇ ಸುತ್ತಿನ ಮಾತುಕತೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.