ಕೊಚ್ಚಿ: ಸಿಲ್ವರ್ ಲೈನ್ ಯೋಜನೆಗೆ ಹೈಕೋರ್ಟ್ ಮತ್ತೆ ಟೀಕೆ ವ್ಯಕ್ತಪಡಿಸಿದೆ. ಡಿಪಿಆರ್ ಗೆ ಕೇಂದ್ರದ ಒಪ್ಪಿಗೆ ಇಲ್ಲದಿರುವಾಗ ಸಾಮಾಜಿಕ ಪರಿಣಾಮ ಅಧ್ಯಯನ ನಡೆಸಿದ್ದು ಏಕೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಸರಕಾರ ಇμÉ್ಟೂಂದು ಹಣ ಏಕೆ ಖರ್ಚು ಮಾಡಿದೆ? ಕೆಲವು ಅಧಿಕಾರಿಗಳು ನಾಟಕ ಆಡುತ್ತಿದ್ದಾರೆ ಮತ್ತು ಹೆಸರೊಂದು ಇರಿಸಿ ಫುಕಾರು ಎಬ್ಬಿಸುವುದು ಯೋಜನೆ ಅಲ್ಲ ಎಂದು ಹೈಕೋರ್ಟ್ ಆರೋಪಿಸಿದೆ.
ಈ ಯೋಜನೆ ಈಗ ಯಾವ ಹಂತದಲ್ಲಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.ಇದೆಲ್ಲ ಅಸ್ತಿತ್ವದಲ್ಲಿಲ್ಲದ ಯೋಜನೆಗಾಗಿ ನಡೆಯುತ್ತಿದೆಯೇ?ಯೋಜನೆಗೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿಲ್ಲ. ಇμÉ್ಟಲ್ಲಾ ಸಮಸ್ಯೆಗಳಿಗೆ ಯಾರು ಸಮಾಧಾನ ಹೇಳಲಿದೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಪ್ರಶ್ನಿಸಿದರು. ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿಸುವಂತೆಯೂ ಹೈಕೋರ್ಟ್ ಕೇಳಿದೆ.
ಯೋಜನೆಯ ಹೆಸರಲ್ಲಿ ನಾಟಕ ಆಡುತ್ತಿದ್ದಾರೆ ಎಂದು ಹೈಕೋರ್ಟ್ ಆರೋಪಿಸಿದೆ.ನ್ಯಾಯಾಲಯಕ್ಕೆ ಏನೂ ಅರ್ಥವಾಗುತ್ತಿಲ್ಲ. ದಿನೇ ದಿನೇ ಕೇರಳದ ವಾತಾವರಣ ಬದಲಾಗುತ್ತಿದೆ.ಜನರಿಗೆ ಅರ್ಥವಾಗುತ್ತದೆ,ಆದರೆ ಆಡಳಿತಗಾರರಿಗೆ ಅರ್ಥವಾಗುತ್ತಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ.
ಕೆ ರೈಲ್ ಸಮೀಕ್ಷೆಯ ಭಾಗವಾಗಿ ಹಳದಿ ಕಲ್ಲು ಅಳವಡಿಸಿರುವುದನ್ನು ನ್ಯಾಯಾಲಯ ವ್ಯಂಗ್ಯವಾಡಿತು.ಬೆಳಿಗ್ಗೆ ಯಾರೋ ಹಳದಿ ಕಲ್ಲನ್ನು ಹೊತ್ತುಕೊಂಡು ಬರುತ್ತಾರೆ ಮತ್ತು ಏಕೆ ಎಂದು ಯಾರಿಗೂ ತಿಳಿದಿಲ್ಲ ಎಂದು ನ್ಯಾಯಾಲಯದ ಗಮನಸೆಳೆಯಿತು. ಕೆ ರೈಲು ಒಂದು ಯೋಜನೆ ಅಲ್ಲ, ಆದರೆ ಉದ್ದೇಶಿತ ಯೋಜನೆ ಮಾತ್ರ ಎಂದು ಹೈಕೋರ್ಟ್ ಸೂಚಿಸಿದೆ.
ಕೇರಳಕ್ಕೆ ಹೈಸ್ಪೀಡ್ ರೈಲ್ವೇ ಮತ್ತು ಹೆದ್ದಾರಿಗಳು ಬೇಕು.ಆದರೆ ಅದಕ್ಕೊಂದು ಮಾನದಂಡ ಬೇಕು.ಅದು ಅಂದುಕೊಂಡಂತೆ ಆಗಬೇಕೆಂದೇನೂ ಇಲ್ಲ ಎಂದು ಹೈಕೋರ್ಟ್ ಹೇಳಿದೆ.ಯೋಜನೆ ಸರಿಯಾದ ರೀತಿಯಲ್ಲಿ ರೂಪವಿದ್ದರೆ ಮಾತ್ರ ಸಾಧ್ಯ. ಅದನ್ನು ನ್ಯಾಯಾಲಯ ಖಚಿತಪಡಿಸುತ್ತದೆ ಎಂದಿದೆ.
ಇದೇ ವೇಳೆ ಸಿಲ್ವರ್ ಲೈನ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದವರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯುವುದಿಲ್ಲ ಎಂದು ಸರ್ಕಾರ ಹೈಕೋರ್ಟ್‍ಗೆ ತಿಳಿಸಿದೆ.
ಹೆಸರಿಟ್ಟು ಕರೆದರೆ ಪ್ಲಾನ್ ಆಗುವುದಿಲ್ಲ, ಕೇಂದ್ರದ ಒಪ್ಪಿಗೆ ಇಲ್ಲದೇ ಇಷ್ಟು ದುಡ್ಡು ಏಕೆ? ಕುಟುಕಿದ ಹೈಕೋರ್ಟ್
0
ಸೆಪ್ಟೆಂಬರ್ 26, 2022