ನವದೆಹಲಿ: ಬ್ರಿಟನ್, ಇಟಲಿ ಹಾಗೂ ಸ್ಪೇನ್‌ಗೆ ಪ್ರಯಾಣಿಸಲು ದಿಲ್ಲಿ ನ್ಯಾಯಾಲಯ ವಿಧಿಸಿರುವ ನಿಯಮಗಳು ಹಾಗೂ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉದ್ಯಮಿ ರಾಬರ್ಟ್ ವಾದ್ರಾ (Businessman Robert Vadra )ಬುಧವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ.
ವಿದೇಶಿ ಪ್ರಯಾಣಕ್ಕೆ ನ್ಯಾಯಾಲಯ ವಿಧಿಸಿರುವ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಾದ್ರಾ ವಿರುದ್ಧ ಸ್ಥಿರ ಠೇವಣಿ ಮತ್ತು ಕಾನೂನು ಕ್ರಮಗಳನ್ನು ಆರಂಭಿಸಲು ಜಾರಿ ನಿರ್ದೇಶನಾಲಯ (ಈಡಿ) ಮಾಡಿದ ಮನವಿಯ ಕುರಿತು ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ನೀಲೋಫರ್ ಅಬಿದಾ ಪರ್ವೀನ್ ಬುಧವಾರ ತನ್ನ ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿದ್ದಾರೆ.
ವಾದ್ರಾ ಅವರು ಬೇಷರತ್ ಕ್ಷಮೆಯಾಚಿಸಿದರು ಹಾಗೂ ಈಡಿ ವಾದ್ರಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಪ್ರಯಾಣಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ತಾನು ಅಚಾತುರ್ಯದಿಂದ ತಪ್ಪು ಮಾಡಿದ್ದು, ದುಬೈಗೆ ಎಂಬ ಬದಲು ದುಬೈ ಮೂಲಕ ಎಂದು ಬರೆದಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ವಾದ್ರಾ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸದ್ಯ ಜಾಮೀನಿನ ಮೇಲೆ ಇದ್ದಾರೆ.
ರಾಬರ್ಟ್ ವಾದ್ರಾ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು. ವಾದ್ರಾ ಅವರ ವಾದವನ್ನು ಈಡಿ ವಕೀಲರು ವಿರೋಧಿಸಿದರು. ಭಾರತವನ್ನು ತೊರೆಯುವ ಮೊದಲು ನ್ಯಾಯಾಲಯಕ್ಕೆ ತನ್ನ ವಿಳಾಸವನ್ನು ಸಲ್ಲಿಸುವಂತೆ ರಾಬರ್ಟ್ ವಾದ್ರಾಗೆ ಸೂಚಿಸಲಾಯಿತು ಹಾಗೂ ಭಾರತಕ್ಕೆ ಮರಳಿದ ನಂತರವೂ ಅವರು ಯುಕೆಯಲ್ಲಿ ಭೇಟಿ ನೀಡಿದ ಸ್ಥಳಗಳ ವಿವರಗಳನ್ನು ಸಲ್ಲಿಸಲಿಲ್ಲ ಎಂದು ಈಡಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ವಕೀಲ ಎನ್‌ಕೆ ಮಟ್ಟಾ ಹೇಳಿದ್ದಾರೆ.