ಕೊಚ್ಚಿ; ಸಿಲ್ವರ್ ಲೈನ್ ಯೋಜನೆಗೆ ಸಂಬಂಧಿಸಿದಂತೆ ಕೆ ರೈಲ್ ಕಾಪೆರ್Çರೇಷನ್ ಅಗತ್ಯ ದಾಖಲೆಗಳನ್ನು ನೀಡುತ್ತಿಲ್ಲ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಕೆಆರ್‍ಡಿಸಿಎಲ್ ಇನ್ನೂ ಅಲೈನ್‍ಮೆಂಟ್, ಅಗತ್ಯವಿರುವ ಖಾಸಗಿ ಭೂಮಿ, ರೈಲ್ವೆ ಭೂಮಿ ಇತ್ಯಾದಿ ವಿವರಗಳನ್ನು ನೀಡಿಲ್ಲ ಎಂದು ರೈಲ್ವೆ ಹೇಳಿದೆ. ವಿವರಗಳಿಗಾಗಿ ಸಂಪರ್ಕಿಸಲಾಗಿತ್ತು. ಆದರೆ ಯಾವುದೇ ಉತ್ತರವಿಲ್ಲ ಎನ್ನಲಾಗಿದೆ.
ಈ ವಿಷಯಗಳ ಕುರಿತು ರೈಲ್ವೇ ಸಚಿವಾಲಯವು ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ಡಿಪಿಆರ್‍ಗೆ ಸಂಬಂಧಿಸಿದಂತೆ ತನ್ನ ನಿಲುವಿನಲ್ಲಿ ಏನಾದರೂ ಬದಲಾವಣೆ ಇದ್ದರೆ ತಿಳಿಸುವಂತೆ ನ್ಯಾಯಾಲಯವು ರೈಲ್ವೇಯನ್ನು ಕೇಳಿತ್ತು.ನಂತರ, ರೈಲ್ವೆ ಈ ಬಗ್ಗೆ ಹೊಸ ವಿವರಣೆಯನ್ನು ನೀಡಿತು.
ಇದೇ ವೇಳೆ ಡಿ.ಪಿ.ಆರ್. ಅಪೂರ್ಣ ಎಂಬುದು ರೈಲ್ವೇಯ ನಿಲುವು. ಯೋಜನೆಯ ತಾಂತ್ರಿಕ ಅಂಶಗಳನ್ನು ಡಿಪಿಆರ್ ನಲ್ಲಿ ಸೇರಿಸಿಲ್ಲ ಎಂದು ಕೇಂದ್ರ ಸರ್ಕಾರವೂ ಈ ಹಿಂದೆಯೇ ಹೈಕೋರ್ಟ್ ನಲ್ಲಿ ಹೇಳಿಕೆ ನೀಡಿದೆ. ಸಿಲ್ವರ್ ಲೈನ್ ಯೋಜನೆ ಅನುμÁ್ಠನಕ್ಕೆ ಯಾವುದೇ ಅನುಮತಿ ನೀಡಿಲ್ಲ ಎಂದು ಕೇಂದ್ರವು ಈ ಹಿಂದೆ ಹೈಕೋರ್ಟ್‍ಗೆ ತಿಳಿಸಿತ್ತು.
ಸಿಲ್ವರ್ ಲೈನ್: ಕೆ ರೈಲ್ ಕಾರ್ಪೋರೇಷನ್ ಅಗತ್ಯ ದಾಖಲೆಗಳನ್ನು ಒದಗಿಸುತ್ತಿಲ್ಲ: ರೈಲ್ವೆ ಸಚಿವಾಲಯದಿಂದ ಹೈಕೋರ್ಟ್‍ಗೆ ವಿವರಣೆ
0
ಸೆಪ್ಟೆಂಬರ್ 25, 2022
Tags