ಕಾಸರಗೋಡು: ಅರಣ್ಯ ಮತ್ತು ವನ್ಯಜೀವಿ ಇಲಾಖೆ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಯಿತು. ಕೇರಳದಲ್ಲಿ ಅರಣ್ಯ ಸಂರಕ್ಷಣಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೂವತ್ತಾರು ಜನರ ಹೆಸರಿನ ಸ್ಮಾರಕದ ಮುಂದೆ ಕಾಸರಗೋಡು ಅರಣ್ಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಚೇರಿ ಎದುರು ವಿಶೇಷವಾಗಿ ಸಿದ್ಧಪಡಿಸಲಾದ ಸ್ಮೃತಿ ಕುಟೀರಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‍ಪಿ ಧನೇಶ್‍ಕುಮಾರ್ ಪುಷ್ಪನಮನ ಸಲ್ಲಿಸಿದರು. ಜೋಧ್‍ಪುರ ಜಿಲ್ಲೆಯ ಖೇಜ್ರಿ ಗ್ರಾಮದಲ್ಲಿ ಖೇಜ್ರಿ ಮರದ ಸಂರಕ್ಷಣೆಗಾಗಿ ಅಮೃತಾದೇವಿ ಸೇರಿದಂತೆ 363 ಜನರ ಪ್ರಾಣತ್ಯಾಗದ ಜತೆಗೆ ಕೇರಳದಲ್ಲಿ ಅರಣ್ಯ ಸಂರಕ್ಷಣಾ ಚಟುವಟಿಕೆಗಳ ವೇಳೆ ಕಾಡಾನೆ ದಾಳಿ, ಮರ ಸಾಗಟ ದಂಧೆಕೋರರು, ವನ್ಯಜೀವಿ ಬೇಟೆಗಾರರ ದಾಳಿಗೆ ಬಲಿಯಾಗಿ ವೀರಮರಣ ಹೊಂದಿದ ಹುತಾತ್ಮರನ್ನು ಈ ಸಂದರ್ಭ ಸ್ಮರಿಸಿದರು. ವಲಯ ಅರಣ್ಯಾಧಿಕಾರಿ ಕೆ.ವಿ. ಅರುಣೇಶ್, ವಲಯ ಅರಣ್ಯಾಧಿಕಾರಿಗಳಾದ ಎನ್.ವಿ. ಸತ್ಯನ್, ಎಂ. ಚಂದ್ರನ್, ಟಿ. ಪ್ರಭಾಕರನ್ ಮತ್ತು ಉಮರ್ ಫಾರೂಕ್ ಉಪಸ್ಥಿತರಿದ್ದರು.
ಹುತಾತ್ಮ ದಿನಾಚರಣೆ: ಪ್ರಾಣತ್ಯಾಗ ಮಾಡಿದ ಅರಣ್ಯಾಧಿಕಾರಿಗಳಿಗೆ ಇಲಾಖೆ ವತಿಯಿಂದ ನಮನ
0
ಸೆಪ್ಟೆಂಬರ್ 12, 2022
Tags