ತಿರುವನಂತಪುರ: ಮೇಯರ್ ಆರ್ಯ ರಾಜೇಂದ್ರನ್ ಮತ್ತು ಬಲುಶೇರಿ ಶಾಸಕ ಸಚಿನ್ ದೇವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಕೆಜಿ ಸೆಂಟ್ರಲ್‍ನಲ್ಲಿ ಸರಳ ಸಮಾರಂಭದಲ್ಲಿ ವಿವಾಹ ನೆರವೇರಿತು.
ಮುಖ್ಯಮಂತ್ರಿ ಸೇರಿದಂತೆ ರಾಜಕೀಯ, ಸಾಮಾಜಿಕ ಕ್ಷೇತ್ರದ ಅನೇಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇವರಿಬ್ಬರ ನಿಶ್ಚಿತಾರ್ಥ ಮಾರ್ಚ್ 6 ರಂದು ನಡೆದಿತ್ತು. ಸಮಾರಂಭವು ಎಕೆಜಿ ಸೆಂಟರ್‍ನಲ್ಲಿ ನಡೆಯಿತು. ತಿರುವನಂತಪುರ ಜಿಲ್ಲಾ ಸಮಿತಿಯು ವಿವಾಹ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಿತ್ತು. ಯಾವುದೇ ಆಡಂಬರವಿಲ್ಲದೆ ಸರಳ ಸಮಾರಂಭದಲ್ಲಿ ಮದುವೆ ನಡೆಯಲಿದೆ ಎಂದು ಸಂಬಂಧಪಟ್ಟವರು ಈ ಹಿಂದೆಯೇ ತಿಳಿಸಿದ್ದರು.
ಸಿಪಿಎಂ ತಿರುವನಂತಪುರಂ ಜಿಲ್ಲಾ ಸಮಿತಿ ಇಬ್ಬರ ವಿವಾಹದ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿತ್ತು. ಇಬ್ಬರ ವಿವಾಹವನ್ನು ಪಕ್ಷ ನೆರವೇರಿಸುವುದಾಗಿ ಒಕ್ಕಣೆಯಿರುವಂತೆ ಪತ್ರವನ್ನು ಪರಿಚಯಿಸಲಾಗಿದೆ. ತಿರುವನಂತಪುರಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಅನವೂರ್ ನಾಗಪ್ಪನ್ ಅವರ ಹೆಸರಿನಲ್ಲಿ ಆಹ್ವಾನವಿದೆ.. ಸಿಪಿಎಂ ಕೋಝಿಕ್ಕೋಡ್ ಜಿಲ್ಲಾ ಕಾರ್ಯದರ್ಶಿ ಪಿ.ಮೋಹನನ್ ಅವರ ಹೆಸರಿನಲ್ಲಿ ಪತ್ರ ಸಿದ್ಧಪಡಿಸಲಾಗಿದೆ. 6ರಂದು ಕೋಯಿಕ್ಕೋಡ್ ನಲ್ಲಿ ವಿವಾಹ ಸೌಹಾರ್ದ ಔತಣ ನಡೆಯಲಿದೆ. ಟ್ಯಾಗೋರ್ ಶತಮಾನೋತ್ಸವ ಭವನದಲ್ಲಿ ಸಂಜೆ 4 ಗಂಟೆಯಿಂದ ಔತಣ ಕೂಟ ನಡೆಯಲಿದೆ.
ಹಸೆಮಣೆ ಏರಿದ ಮೇಯರ್ ಮತ್ತು ಎಂಎಲ್ಎ: ಸಚಿನ್ ದೇವ್ ಮತ್ತು ಆರ್ಯ ವಿವಾಹ ಸಂಪನ್ನ
0
ಸೆಪ್ಟೆಂಬರ್ 04, 2022