ಕಾಸರಗೋಡು: ಕೇರಳ ಓಣಂ ಬಂಪರ್ ಲಾಟರಿ ಡ್ರಾ ದಿನಾಂಕ ಸಮೀಪಿಸುತ್ತಿದ್ದಂತೆ ಲಾಟರಿ ಟಿಕೆಟ್ ಮಾರಾಟದಲ್ಲೂ ಏರಿಕೆ ಕಂಡುಬರಲಾರಂಭಿಸಿದೆ. ಟಿಕೆಟ್ ಒಂದರ ಬೆಲೆ 500ರೂ. ಆಗಿದ್ದು, ಪ್ರಥಮ ಬಹುಮಾನ 25ಕೋಟಿ ರೂ. ಆಗಿದೆ. ಸೆಪ್ಟಂಬರ್ 18ರಂದು ಲಾಟರಿ ಡ್ರಾ ನಡೆಯಲಿದೆ.
ಕಾಸರಗೋಡು ಜಿಲ್ಲಾ ಲಾಟರಿ ಇಲಾಖೆ ಲೆಕ್ಕಾಚಾರ ಪ್ರಕಾರ ಜಿಲ್ಲೆಯಲ್ಲಿ ಮಂಗಳವಾರದ ವರೆಗೆ 16.63ಲಕ್ಷ ಟಿಕೆಟ್‍ಗಳು ಮಾರಾಟವಾಗಿದೆ. ಎರಡು ಲಕ್ಷ ಟಿಕೆಟ್ ಮಾರಾಟವಾಗುವ ಸಾಧ್ಯತೆಯಿರುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಕಳೆದ ವರ್ಷದ ಜಿಲ್ಲೆಯಲ್ಲಿ ಓಣಂ ಬಂಪರ್‍ನ 17.28ಲಕ್ಷ ಟಿಕೆಟ್ ಮಾರಾಟವಾಗಿತ್ತು. ಅಂದಿನ ಲಾಟರಿ ಟಿಕೆಟ್ ಬೆಲೆ 300ರೂ. ಆಗಿತ್ತು. ಟಿಕೆಟ್ ಖರೀದಿಗಾಗಿ ನೆರೆಯ ದ.ಕ ಜಿಲ್ಲೆಯಿಂದಲೂ ಲಾಟರಿಪ್ರಿಯರು ಕಾಸರಗೋಡಿಗೆ ಆಗಮಿಸುತ್ತಿದ್ದಾರೆ.
ಓಣಂ ಬಂಪರ್ ಡ್ರಾ ಜಿಲ್ಲೆಯಲ್ಲಿ ಲಾಟರಿಯ ಬಿರುಸಿನ ವ್ಯಾಪಾರ
0
ಸೆಪ್ಟೆಂಬರ್ 14, 2022