ಕಾಸರಗೋಡು: ಮಾದಕ ವ್ಯಸನ ಮುಕ್ತ ಕೇರಳಕ್ಕಾಗಿ ಗಾಂಧಿ ಜಯಂತಿಯಂದು ವಿದ್ಯಾರ್ಥಿಗಳ ಮನಪರಿವರ್ತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾದಕದ್ರವ್ಯ ವಿರುದ್ಧ ಜನರನ್ನು ಒಗ್ಗೂಡಿಸುವ ಸುದೀರ್ಘ ಕ್ರಿಯಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಪೆÇೀಷಕರು, ಶಿಕ್ಷಕರು ಮತ್ತು ಜನಸಾಮಾನ್ಯರು ಕೈಜೋಡಿಸಲಿದ್ದಾರೆ.
ಮಾದಕದ್ರವ್ಯದ ಕರಿ ನೆರಳು ಸಮಾಜದ ಪ್ರಗತಿಗೆ ಮಾರಕವಾಗಿ ಪರಿಣಮಿಸುವುದನ್ನು ತಡೆಗಟ್ಟುವನಿಟ್ಟಿನಲ್ಲಿ ಕೇರಳದ 47 ಲಕ್ಷ ಮಕ್ಕಳು ತಮ್ಮ ಪೆÇೀಷಕರು, ಶಿಕ್ಷಕರು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಹೆಜ್ಜೆಹಾಕಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ರಾಜ್ಯದ ಎಲ್ಲ ಶಿಕ್ಷಕರಿಗೆ ಅರ್ಧ ದಿನದ ತರಬೇತಿ ನೀಡಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಾ ಕೇರಳ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಶಿಕ್ಷಕರ ತರಬೇತಿಯ ಪೂರ್ವಭಾವಿಯಾಗಿ ಜಿಲ್ಲೆಯ ಆಯ್ದ ಶಿಕ್ಷಕರು, ಬಿಪಿಸಿ, ಬಿಆರ್‍ಸಿ ತರಬೇತುದಾರರು, ಸಿಆರ್‍ಸಿ ಸಂಯೋಜಕರು, ಡಯಟ್ ಉಪನ್ಯಾಸಕರು ಮತ್ತು ವಿಶೇಷ ಶಿಕ್ಷಕರಿಗೆ ತರಬೇತಿಯನ್ನು ಆಯೋಜಿಸಲಾಗಿದ್ದು, ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಮಾಯಿಪ್ಪಾಡಿ ಡಯೆಟ್ ಪ್ರಾಂಶುಪಾಲ ಕೆ.ರಘುರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿಮುಕ್ತಿ ಮಿಷನ್ ಜಿಲ್ಲಾ ವ್ಯವಸ್ಥಾಪಕ ಹರಿದಾಸನ್ ಪಾಲಕಲ್, ವಿಮುಕ್ತಿ ಜಿಲ್ಲಾ ಸಂಯೋಜಕಿ ಕೆ.ಸ್ನೇಹಾ, ಅಬಕಾರಿ ಅಧಿಕಾರಿ ಎನ್.ಜಿ.ರಘುನಾಥನ್, ಡಾ.ರಿನ್ಸ್ ಮಣಿ, ಡಾ.ದಲ್ಮಿತಾ ನಿಯಾ ಜೇಮ್ಸ್ ಉಪಸ್ಥಿತರಿದ್ದರು. ಸಮಗ್ರ ಶಿಕ್ಷಾ ಜಿಲ್ಲಾ ಯೋಜನಾ ಸಂಯೋಜಕ ಪಿ.ರವೀಂದ್ರನ್ ಸ್ವಾಗತಿಸಿದರು. ಹೊಸದುರ್ಗ ಬಿಪಿಸಿ ಕೆ.ಪಿ.ವಿಜಯಲಕ್ಷ್ಮಿ ವಂದಿಸಿದರು. ಎ.ಪ್ರಸನ್ನ, ಅಶೋಕನ್ ಕುಂಡಂಗುಳಿ, ಟಿ.ಕಾಸಿಂ, ಬಾಲಚಂದ್ರನ್ ಎರವಿಲ್, ಕೆ.ವಿ.ಸುರೇಶ್, ಪಿ.ವಿಜಯಕುಮಾರ್, ವಿ.ವಿ.ಸುಬ್ರಮಣಿಯನ್ ತರಗತಿ ನಡೆಸಿದರು.
ಗಾಂಧಿ ಜಯಂತಿಯಂದು ಮಾದಕದ್ರವ್ಯ ವಿರುದ್ಧ ಜಾಗೃತಿ ಅಭಿಯಾನ
0
ಸೆಪ್ಟೆಂಬರ್ 25, 2022
Tags