ಕುಂಬಳೆ: ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ವೈದ್ಯರ ತಂಡವೊಂದು ಗರ್ಭಾಶಯದ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಮಹಿಳೆಯ ಉದರದಲ್ಲಿದ್ದ ಐದು ಕಿಲೋ ಭಾರದ ಗಡ್ಡೆಯನ್ನು ಹೊರ ತೆಗೆದಿದ್ದಾರೆ.
ಉದರವೇದನೆ ಹಿನ್ನೆಲೆಯಲ್ಲಿ 54ರ ಹರೆಯದ ಅವಿವಾಹಿತ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿದಾಗ ಗರ್ಭಾಶಯದಲ್ಲಿ ಗಡ್ಡೆಯೊಂದು ಕಂಡು ಬಂದಿದೆ. ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎಚ್. ಅರ್ಚನಾ ನೇತೃತ್ವದ ವೈದ್ಯರ ತಂಡ ತಾಸುಗಳ ಕಾಲ ನಡೆಸಿದ ಶಸ್ತ್ರಕ್ರಿಯೆಯಿಂದ ಹೊರ ತೆಗೆಯಲಾಗಿದೆ. ಮಹಿಳೆ ಚೇತರಿಸುತ್ತಿದ್ದಾರೆ.
ಗರ್ಭಾಶಯದಲ್ಲಿ ಐದು ಕಿಲೋ ಗಾತ್ರದ ಗಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ; ಕುಂಬಳೆ ಸಹಕಾರಿ ಆಸ್ಪತ್ರೆಯ ಸಾಧನೆ
0
ಸೆಪ್ಟೆಂಬರ್ 23, 2022