ಕಾಸರಗೋಡು: ಬಿಲ್ಲವ ಸೇವಾ ಸಂಘ ಕಾಸರಗೋಡು ವತಿಯಿಂದ ಬ್ರಹ್ಮಶ್ರೀ ನಾರಯಣ ಗುರುಗಳ 168ನೇ ಜಯಂತ್ಯುತ್ಸವ ಸೆ. 10ರಂದು ಕರಂದಕ್ಕಾಡು ಶ್ರೀ ನಾರಾಯಣಗುರು ಮಂದಿರ ಸಭಾಂಗಣದಲ್ಲಿ ಜರುಗಲಿರುವುದು. ಬೆಳಗ್ಗೆ 8.30ಕ್ಕೆ ಗಣಪತಿ ಹೋಮ, ಭಜನೆ, ಮಧ್ಯಾಹ್ನ 12.30ಕ್ಕೆ ಗುರುಪೂಜೆ ಜರುಗಲಿರುವುದು.
ಪೆರ್ಲದಲ್ಲಿ ಗುರುನಮನ:
ಬ್ರಹ್ಮಶ್ರೀ ನಾರಾಯಣಗುರು ಧರ್ಮಸೇವಾ ಸಂಘ ಪೆರ್ಲ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತಿ ಉತ್ಸವ ಸೆ. 10ರಂದು ಬೆಳಗ್ಗೆ 10ಕ್ಕೆ ಪೆರ್ಲ ವ್ಯಾಪಾರಿ ಭವನದಲ್ಲಿ ಜರುಗಲಿರುವುದು. ಈ ಸಂದರ್ಭ ಶ್ರೀನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಶ್ರೀಗುರುಗಳ ಸಂದೇಶದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.
ಬ್ರಹ್ಮಶ್ರೀ ನಾರಾಯಣಗುರು ಜಯಂತಿ: ವಿವಿಧೆಡೆ ಕಾರ್ಯಕ್ರಮ
0
ಸೆಪ್ಟೆಂಬರ್ 07, 2022
Tags