HEALTH TIPS

ಅತಿಯಾದ ಫೋಲಿಕ್‌ ಆಸಿಡ್‌ ಸೇವನೆ ಕೋವಿಡ್‌ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು: ಅಧ್ಯಯನ

 ಹಿಂದಿಗಿಂತಹ ಕೋವಿಡ್‌ ಸಾಂಕ್ರಾಮಿಕವು ಕೊಂಚಮಟ್ಟಿಗೆ ತಗ್ಗಿದಂತಿದೆ. ಆದರೆ ಇದರ ಮೇಲೆ ಸಂಶೋಧನೆಗಳು ನಡೆಯುತ್ತಲೇ ಇದೆ. ಯುಕೆಯಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಫೋಲಿಕ್‌ ಆಸಿಡ್ ಪ್ರಿಸ್ಕ್ರಿಪ್ಷನ್‌ ಹೊಂದಿರುವ ಯುಕೆ ಜನರು ಕೋರೊನಾ ಸೋಂಕಿಗೊಳಗಾಗುವ ಸಾಧ್ಯತೆ 1.5ರಷ್ಟು ಹೆಚ್ಚಿ ಮತ್ತು ನಿಯಂತ್ರಣಕ್ಕೆ ಸಂಬಂಧಿಸದಂತೆ ಈ ಸಾಂಕ್ರಾಮಿಕದಿಂದ ಮರಣ ಹೊಂದುವ ಸಾಧ್ಯತೆ 2.6ಗಿಂತ ಹೆಚ್ಚಿರುತ್ತದೆ ಎನ್ನುವುದನ್ನು ವಿವರಿಸಿದೆ.

ಬಿಎಂಜೆ ಓಪನ್‌ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನೆಯಲ್ಲಿ ಆಂಟಿಫೋಲೆಟ್‌ ಡ್ರಗ್‌ ಮೆಥೊಟ್ರೆಕ್ಸೇಟ್‌ನ ಪ್ರಿಸ್ಕ್ರಿಪ್ಷನ್‌ ಹೊಂದಿರುವವರ ಮೇಲೆ ಕೊರೋನಾ ಸೋಂಕು ಋಣಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದನ್ನು ಕಂಡುಹಿಡಿಯಲಾಗಿದೆ.

ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ ಡೇವಿಸ್‌ ಮತ್ತು ಯುಸ್‌ನ ಯುನಿವರ್ಸಿಟಿ ಆಫ್‌ ಅಲ್ಬಾಮಾದ ಸಂಶೋಧಕರು ಯುಕೆ ಬಯೋಬ್ಯಾಂಕ್‌ನಲ್ಲಿ ದಾಖಲಾದ ಅತೀ ಹೆಚ್ಚು ರೋಗಿಗಳ ಮೇಲೆ ಅಧ್ಯಯನ ನಡೆಸಿದರು. ಈ ಅಧ್ಯಯನದಲ್ಲಿ ಅರ್ಧ ಮಿಲಿಯನ್‌ ಜನರ ಆರೋಗ್ಯ ಮಾಹಿತಿಯನ್ನು ಒಳಗೊಂಡಿರುವ ಪ್ರಮುಖ ಬಯೋಮೆಡಿಕಲ್‌ ಡಾಟಾಬೇಸ್‌ ಪರಿಗಣಿಸಲಾಗಿತ್ತು.

ಕೋವಿಡ್‌ ಸೋಂಕಿನ ರೋಗನಿರ್ಣಯ ಮತ್ತು ಮರಣವು ದೊಡ್ಡ ಪ್ರಮಾಣದ ಫೋಲಿಕ್‌ ಆಮ್ಲವನ್ನು ತೆಗೆದುಕೊಂಡವರಲ್ಲಿ ಹೆಚ್ಚಾಗಿ ಕಂಡುಬಂದಿದೆಯೇ ಎನ್ನುವುದನ್ನು ಪರಿಶೀಲಿಸಲಾಗಿದೆ. ವೈದ್ಯಕೀಯವಾಗಿ ಅನುಮೋದನೆ ಪಡೆದು ಸುರಕ್ಷಿತ ಮಿತಿಯಲ್ಲಿ ಫೋಲಿಕ್‌ ಆಮ್ಲದ ಔಷಧಿಯನ್ನು ತೆಗೆದುಕೊಂಡವರಿಗಿಂತ, ಐದು ಪಟ್ಟು ಹೆಚ್ಚು ಫೋಲಿಕ್‌ ಆಮ್ಲವನ್ನು ತೆಗೆದುಕೊಂಡವರಲ್ಲಿ ಕೋವಿಡ್ ರೋಗಲಕ್ಷಣಗಳು ಕಂಡುಬಂದಿದೆ ಎಂದು ಯುಸಿ ಡೇವಿಸ್‌ನ ಪ್ರಾಧ್ಯಾಪಕ ರಾಲ್ಫ್‌ ಗ್ರೀನ್‌ ಹೇಳಿದ್ದಾರೆ.


" ಫೋಲಿಕ್‌ ಆಮ್ಲದಿಂದ ಚಿಕಿತ್ಸೆ ಪಡೆದವರ ಗುಂಪಿನಲ್ಲಿ ಕೋವಿಡ್‌ನಿಂದ ಸೋಂಕಿಗೆ ಒಳಗಾಗುವ ಮತ್ತು ಮರಣದ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎನ್ನುವುದನ್ನು ಈ ಅಧ್ಯಯನದಲ್ಲೊ ಕಂಡುಕೊಳ್ಳಲಾಗಿದೆ ಎಂದು ಅಧ್ಯಯನದ ಸಹ ಹಿರಿಯ ಲೇಖಕ ಗ್ರೀನ್‌ ಹೇಳಿದರು. ಫೋಲಿಕ್‌ ಆಮ್ಲವು ವಿಟಮಿನ್‌ಬಿ9ನ ಸಂಶ್ಲೇಷಿತ ರೂಪವಾಗಿದ್ದು ಇದನ್ನು ಫೋಲೆಟ್‌ ಎಂದು ಕರೆಯುತ್ತಾರೆ. ಇದು ಅಲ್ಪ ಆರೋಗ್ಯ ಸ್ಥಿತಿಯೊಂದಿಗೆ ಸಂಬಂಧಿಸಿದೆ. ಉದಾಹರಣೆಗೆ ಹೃದ್ರೋಗ, ಪಾರ್ಶ್ವವಾಯು ಮತ್ತು ಜನ್ಮದೋಷಗಳ ಅಪಾಯ ಹೆಚ್ಚಿರುತ್ತದೆ. ಫೋಲಿಕ್‌ ಆಮ್ಲದ ಔಷಧಿಯನ್ನು ಸಾಮಾನ್ಯವಾಗಿ ಸಿಕಲ್‌ ಸೆಲ್‌ ಸಮಸ್ಯೆ, ಹೆಚ್ಚು ಅಪಾಯದ ಗರ್ಭಧಾರಣೆ ಮತ್ತು ಆಂಟಿ ಸೀಝರ್‌ ಔಷಧಿಯನ್ನು ತೆಗೆದುಕೊಳ್ಳುತ್ತಿರುವವರಿಗೆ ಸೂಚಿಸಲಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಕೆಲವು ರೀತಿಯ ಕ್ಯಾನ್ಸರ್‌ ಮತ್ತು ಕೆಲವು ಸ್ವಯಂ ನಿರೋಧಕ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಮೆಥೋಟ್ರೆಕ್ಸೇಟ್‌ ಅನ್ನು ತೆಗೆದುಕೊಳ್ಳುವ ರೋಗಿಗಳಿಗೆ ಕೆಲವು ಅಡ್ಡಪರಿಣಾಮವನ್ನು ನಿವಾರಿಸಲು ಫೋಲಿಕ್‌ ಆಮ್ಲದ ಔಷಧಿಯನ್ನು ಸೂಚಿಸುತ್ತಾರೆ. ಈ ಔಷಧವು ಆಂಟಿ ಫೋಲೆಟ್‌ ಆಗಿದ್ದು. ಅಂದರೆ ಇದು ಫೋಲೆಟ್‌ಗೆ ಅಡ್ಡಿಪಡಿಸುತ್ತದೆ. ಇದು ಕ್ಯಾನ್ಸರ್‌ ಕೋಶಗಳ ಪ್ರಸರಣಕ್ಕೆ ಅಗತ್ಯವಾಗಿರುತ್ತದೆ.
ಸಂಶೋಧಕರು 2019 ರಿಂದ 2021ರವೆರೆಗೆ ಫೋಲಿಕ್‌ ಆಸಿಡ್‌ ಮತ್ತು ಮೆಥ್ರೊಟ್ರೆಕ್ಸೇಟ್‌ ಪ್ರಿಸ್ಕ್ರಿಪ್ಷನ್‌ ಡೇಟಾ ಇರುವ 380 ಜನ ಮತ್ತು ಯುಕೆ ಬಯೋಬ್ಯಾಂಕ್‌ನ 380ಜನರ ಡೇಟಾವನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಕೊರೊನಾ ಹೊಂದಿರುವ 26,033 ವ್ಯಕ್ತಿಗಳನ್ನು ಗುರುತಿಸಿದ್ದಾರೆ. ಅದರಲ್ಲಿ 820ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಮೆಥೋಟ್ರೆಕ್ಟೇಟ್‌ ತೆಗೆದುಕೊಂಡಿರುವ ಜನರು ಕೂಡಾ ಸಾಮಾನ್ಯ ಅಧ್ಯಯನದ ಜನಸಂಖ್ಯೆಯಷ್ಟೇ ಕೋವಿಡ್‌ ಸೋಂಕಿಗೆ ಒಳಪಟ್ಟಿದ್ದಾರೆಂದು ಕಂಡುಕೊಳ್ಳಲಾಗಿದೆ. ಫೋಲಿಕ್‌ ಆಸಿಡ್‌ ಔಷಧಿ ತೆಗೆದುಕೊಳ್ಳುವ ಜನರು ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇಕಡಾ 5.99ನಷ್ಟು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸಾಮಾನ್ಯ ಜನರಿಗಿಂತ ಹೆಚ್ಚು ಕೋವಿಡ್‌ ಮರಣ ಪ್ರಮಾಣ ಅಂದರೆ ಶೇಕಡಾ 15.97ರಷ್ಡು ಹೊಂದಿದ್ದಾರೆಂದು ಅಧ್ಯಯನದಲ್ಲಿ ತಿಳಿದುಬಂದಿದೆ.
" ಇತರ ಔಷಧಿಯ ಅಡ್ಡಪರಿಣಾಮವನ್ನು ನಿವಾರಿಸಲು ಫೋಲೆಟ್‌ ಪೂರಕ ಔಷಧಿಯನ್ನು ತೆಗೆದುಕೊಂಡ ರೋಗಿಗಳ ಮೇಲೆ ಕೊರೊನಾ ಸೋಂಕು ಹೆಚ್ಚು ಪರಿಣಾಮ ಬೀರುತ್ತದೆ'' ಎಂದು ಅಲ್ಬಾಮಾ ವಿಶ್ವವಿದ್ಯಾಲಯದ ಸಹ ಹಿರಿಯ ಲೇಖಕ ಮತ್ತು ಸಹಾಯಕ ಪ್ರಾಧ್ಯಾಪಕ ಏಂಜೆಲೊ ಎಲ್‌ ತಿಳಿಸಿದ್ದಾರೆ.
''ಫೋಲೆಟ್‌ ಔಷಧಗಳನ್ನು ತೆಗೆದುಕೊಳ್ಳುವ ಸಂದರ್ಭವಿದ್ದರೂ, ವೈದ್ಯರು ಅತಿಯಾದ ಫೋಲೆಟ್‌ ಸೇವನೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಂಶೋಧಕರು ಹೇಳಿದ್ದಾರೆ.
ಯುಕೆ ಬಯೋಬ್ಯಾಂಕ್‌ನ ಡೇಟಾವನ್ನು ಆಧರಿಸಿ ಪ್ರಸ್ತುತ ಸಂಶೋಧನೆಯು 45ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರ ಮೇಲೆ ಸೀಮಿತವಾಗಿದೆ. ಯಾಕೆಂದರೆ ಇವರು ಪ್ರಧಾನವಾಗಿ ಯುಕೆಯಲ್ಲಿರುವ ಜನರಲ್ಲಿ ವೈಟ್‌ ಯುರೋಪಿಯನ್ಸ್ ಆಗಿದ್ದಾರೆ. ಸಾರ್ಸ್‌ ಕೋವಿಡ್‌ 2 ಸೋಂಕಿಗೆ ಒಳಗಾಗುವ ಮತ್ತು ಆ ಸೋಂಕಿನ ಮಾರಣಾಂತಿಕ ಲಕ್ಷಣಗಳ ಮೇಲೆ ಫೋಲೆಟ್‌ ಸ್ಥಿತಿ ಮತ್ತು ಫೋಲಿಕ್‌ ಆಮ್ಲದ ಸೇವನೆಯ ಪ್ರಭಾವವನ್ನು ಕಂಡುಹಿಡಿಯಲು ಇನ್ನೂ ಹೆಚ್ಚಿನ ತನಿಖೆ ಮಾಡಬೇಕಾದ ಅಗತ್ಯವಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
" ಸಾಮಾನ್ಯವಾಗಿ ಸುರಕ್ಷಿತ ಫೋಲಿಕ್‌ ಆಮ್ಲ ಪೂರಕದ ಮಿತಿಯು ಒಂದು ಮಿಲಿಗ್ರಾಂ ಆಗಿದೆ. ಹೆಚ್ಚಿನ ಮಾಹಿತಿ ದೊರೆಯುವವರೆಗೆ ವೈದ್ಯಕೀಯವಾಗಿ ಸೂಚಿಸದ ಹೊರತು ಹೆಚ್ಚಿನ ಪ್ರಮಾಣದ ಫೋಲಿಕ್‌ ಆಮ್ಲ ಪೂರಕ ಔಷಧವನ್ನು ಸೇವಿಸದಿರುವುದು ಒಳ್ಳೆಯದು. ಹೆಚ್ಚಿನ ಫೋಲಿಕ್‌ ಆಮ್ಲವು ಕೊರೊನಾ ಲಸಿಕೆ ಪಡೆಯದ ವ್ಯಕ್ತಿಗಳಲ್ಲಿ ಸಮಸ್ಯೆಯನ್ನುಂಟು ಮಾಡಬಹುದು ಎಂದು ಸಂಶೋಧಕ ಗ್ರೀನ್ ತಿಳಿಸಿದ್ದಾರೆ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries