ಬದಿಯಡ್ಕ: ಬಾಂಜತ್ತಡ್ಕ ಉದಯಗಿರಿ ಭಗತ್ ಸಿಂಗ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿನ ಮಹಾಸಭೆಯಲ್ಲಿ ಉದಯಗಿರಿ ಶಾಲಾ ರಸ್ತೆ ಹಾಗೂ ಬಾಂಜತ್ತಡ್ಕ ಎಸ್.ಸಿ.ಕೊಲನಿ ರಸ್ತೆಯನ್ನು ಡಾಮರೀಕರಣಗೊಳಿಸಬೇಕು, ಬಾಂಜತ್ತಡ್ಕ ಕಮ್ಯೂನಿಟಿ ಹಾಲ್‍ಗೆ ವಿದ್ಯುತ್ ಸಂಪರ್ಕ ನೀಡಬೇಕೆಂಬ ಬೇಡಿಕೆಯನ್ನು ಸಂಬಂದಪಟ್ಟ ಇಲಾಖೆಗೆ ನೀಡಲು ತೀರ್ಮಾನಿಸಲಾಯಿತು. ಅನೇಕ ವರ್ಷಗಳಿಂದ ರಸ್ತೆಯು ಸಂಚರಿಸಲಸಾಧ್ಯವಾದ ರೀತಿಯಲ್ಲಿ ಇದೆ. ಇದನ್ನು ಕೂಡಲೇ ಅಭಿವೃದ್ಧಿಗೊಳಿಸಿ ಡಾಮರೀಕರಣಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೃಷ್ಣ ಕುಮಾರ ಬಾಂಜತ್ತಡ್ಕ, ಕಾರ್ಯದರ್ಶಿಯಾಗಿ ವಸಂತ ಕುಮಾರ ಬಾಂಜತ್ತಡ್ಕ ಹಾಗೂ ಕೋಶಾಧಿಕಾರಿಯಾಗಿ ಸತ್ಯಪ್ರಕಾಶ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ರವಿ ಕ್ರಾಸ್ತಾ, ಜೊತೆಕಾರ್ಯದರ್ಶಿಯಾಗಿ ಅಭಿಲಾಷ್ ಕೈಲಂಕಜೆ ಹಾಗೂ ಮೇಲ್ವಿಚಾರಕರಾಗಿ ರವಿ ಕೈಲಂಕಜೆ ಅವರನ್ನು ಆರಿಸಲಾಯಿತು.
ಉದಯಗಿರಿ ಶಾಲಾ ರಸ್ತೆ ಡಾಮರೀಕರಣಕ್ಕೆ ಭÀಗತ್ ಸಿಂಗ್ ಕ್ಲಬ್ ಒತ್ತಾಯ
0
ಸೆಪ್ಟೆಂಬರ್ 11, 2022