ಬದಿಯಡ್ಕ: ನಮ್ಮ ನಡಿಗೆ ಪ್ರಕೃತಿಯ ಕಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ಪೆರಡಾಲ ನವಜೀವನ ಹೈಸ್ಕೂಲಿನ ವಿದ್ಯಾರ್ಥಿಗಳಿಗಾಗಿ ಪ್ರಕೃತಿ ಶಿಬಿರ ನಡೆಯಿತು.
62 ಮಂದಿ ಪ್ರಕೃತಿ ಪ್ರೇಮಿಗಳನ್ನೊಳಗೊಂಡ ತಂಡವು 2ದಿನಗಳ ಕಾಲ ನಡೆದ ಶಿಬಿರದಲ್ಲಿ ಶಾಲಾ ಪರಿಸರದ ವಿವಿಧೆಡೆಗಳಿಗೆ ಸಂಚರಿಸಿ ಪ್ರಾಕೃತಿಕ ವೈಚಿತ್ರ್ಯಗಳ ಅರಿವನ್ನು ಪಡೆದುಕೊಂಡರು. ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ವೆಂಕಟರಮಣ ಭಟ್ ಪಿ. ಉದ್ಘಾಟಿಸಿದರು.
ಶಾಲಾ ಮುಖ್ಯೋಪಾದ್ಯಾಯಿನಿ ಮಿನಿ ಟೀಚರ್ ಶುಭಹಾರೈಸಿದರು. ಉರಗ ಪ್ರೇಮಿ ರಾಜ ಕಿದೂರು ಹಾಗೂ ಪ್ರಣವ್ ಜೈವ ವೈವಿದ್ಯ ಸಂರಕ್ಷಣೆ ಯಾಕೆ ಏನು ಹೇಗೆ ಎಂಬ ಕುರಿತಾದ ಸಂವಾದ ನಡೆಸಿ ಜೀವ ಸಂಕಲ್ಪದ ಮಹತ್ವ ಹಾಗೂ ಪ್ರಕೃತಿ ಶುಚಿತ್ವದ ಮಹತ್ವವನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ದಿವ್ಯಾಟೀಚರ್ ಹಾಗೂ ಪ್ರಭಾವತೀ ಟೀಚರ್ ಆರೋಗ್ಯಯುತ ಪೇಯಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಶಾಲಾ ಪರಿಸರವನ್ನು ಶುಚಿಗೊಳಿಸಿ ಬಾಳೆಗಿಡಗಳನ್ನು ನೆಟ್ಟರು. ಅಧ್ಯಾಪಕ ಸೋಮನಾಥ ಅವರ ನೇತೃತ್ವದಲ್ಲಿ ಮರುದಿನ ಬೆಳಗ್ಗೆ ಪ್ರಕೃತಿನಡಿಗೆ ನಡೆಸಿ ಶಾಲಾ ಸಹಾಯಕ ಗೋಪಾಲ ಅವರ ಮನೆಯಲ್ಲಿ ಮೀನು ಕೃಷಿ ವಿವರ ಸಂಗ್ರಹಿಸಲಾಯಿತು. ಸಾರಡ್ಕ ಶಂಕರನಾರಾಯಣ ಭಟ್ ಅವರು ಅಂತರ್ಜಲ ಉಳಿಸುವ ಕುರಿತಾಗಿ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ ಕವಿತಾ ಟೀಚರ್ ದಿವ್ಯ ಟೀಚರ್ ಪದ್ಮಾವತಿ ಟೀಚರ್ ನೇತೃತ್ವ ವಹಿಸಿದರು. ಶಾಲೆಯ ಅಧ್ಯಾಪಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸರಸೀರುಹಾಕ್ಷನ್ ನಂಬಿಯಾರ್ ನೇತೃತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹೂವಿನ ಗಿಡ ನೀಡಲಾಯಿತು. ಬದಿಯಡ್ಕದ ಪೆರ್ಮುಖ ಡಾ ಕೃಷ್ಣಪ್ರಕಾಶ್ ಹಾಗೂ ಸ್ನೇಹಾ ಕೃಷ್ಣಪ್ರಕಾಶರ ತೋಟದಲ್ಲಿ ಬೆಳೆಸಿದ 100ಕ್ಕೂ ಮಿಕ್ಕಿದ ಔಷೀಯ ಸಸ್ಯಗಳ ಪರಿಚಯವನ್ನು ತಿಳಿಸಿಕೊಟ್ಟರು.
ನವಜೀವನ ಶಾಲಾ ವಿದ್ಯಾರ್ಥಿಗಳಿಗೆ ಪ್ರಕೃತಿ ಶಿಬಿರ
0
ಸೆಪ್ಟೆಂಬರ್ 21, 2022