HEALTH TIPS

ಕೋವಿಡ್ ಎರಡನೇ ಅಲೆಯ ವೇಳೆ 'ಅಕ್ಸಿಜನ್ ಕೊರತೆಯಿಂದ' ಉಂಟಾದ ಸಾವುಗಳ ಆಡಿಟ್ ನಡೆಸಬೇಕು: ಸಂಸದೀಯ ಸ್ಥಾಯಿ ಸಮಿತಿ

             ವದೆಹಲಿ:ಪ್ರಮುಖವಾಗಿ ದೇಶದಲ್ಲಿ ಕೋವಿಡ್ ಎರಡನೇ ಅಲೆ ಸಂದರ್ಭ 'ಆಕ್ಸಿಜನ್ ಕೊರತೆಯಿಂದ ಉಂಟಾದ ಸಾವುಗಳಿಗೆ' (Oxygen Shortage) ಸಂಬಂಧಿಸಿದಂತೆ ಸರಕಾರ ಆಡಿಟ್(Audit) ನಡೆಸಬೇಕೆಂದು ಸಂಸದೀಯ ಆರೋಗ್ಯ ಸ್ಥಾಯಿ ಸಮಿತಿಯು ಸೋಮವಾರ ರಾಜ್ಯಸಭೆಯಲ್ಲಿ(Rajyasabha) ಮಂಡಿಸಿದ ತನ್ನ 137ನೇ ವರದಿಯಲ್ಲಿ ಶಿಫಾರಸು ಮಾಡಿದೆ.

               "ಆಕ್ಸಿಜನ್ ಕೊರತೆಯಿಂದ ಉಂಟಾದ ಕೋವಿಡ್ ಸಾವುಗಳನ್ನು(Covid Death) ಕೇಂದ್ರ ಆರೋಗ್ಯ ಸಚಿವಾಲಯ (Central Health Ministry) ಕೂಲಂಕಷವಾಗಿ ಪರಿಶೀಲಿಸಿ ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು" ಎಂದು ಹೇಳಿದ ಸಮಿತಿಯ ವರದಿಯು ಆಕ್ಸಿಜನ್ ಕೊರತೆಯಿಂದ ಉಂಟಾದ ಸಾವುಗಳನ್ನು ಸಚಿವಾಲಯ ಅಲ್ಲಗಳೆದಿರುವುದು ದುರಾದೃಷ್ಟಕರ ಎಂದು ಬಣ್ಣಿಸಿದೆ.

                  ನಿಯಂತ್ರಣ ಕ್ರಮಗಳನ್ನು ಸಕಾಲದಲ್ಲಿ ಕೈಗೊಂಡಿದ್ದಲ್ಲಿ ಹಲವಾರು ಜೀವಗಳನ್ನು ಉಳಿಸಬಹುದಾಗಿತ್ತು, ಕೋವಿಡ್ ಪ್ರಕರಣಗಳ ದಿಢೀರ್ ಏರಿಕೆ ವೈದ್ಯಕೀಯ ವ್ಯವಸ್ಥೆ ಮೇಲೆ ಒತ್ತಡ ಹೇರಿರುವ ಜೊತೆಗೆ ಕುಟುಂಬಗಳು ಆಕ್ಸಿಜನ್‍ಗಾಗಿ ಅಂಗಲಾಚುವ ಪರಿಸ್ಥಿತಿ ಹಾಗೂ ಸಿಲಿಂಡರ್‍ಗಳಿಗಾಗಿ ಸರತಿ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

                 "ಸಂಭಾವ್ಯ ಆಕ್ಸಿಜನ್ ಕೊರತೆ ಕುರಿತು ಸಮಿತಿ ತನ್ನ 123ನೇ ವರದಿಯಲ್ಲಿಯೇ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. ಆದರೆ, ಸಚಿವಾಲಯವು 2020 ರಲ್ಲಿ ನೀಡಿದ ವರದಿಯಲ್ಲಿ ದೇಶದಲ್ಲಿ ಆಕ್ಸಿಜನ್ ಸಾಕಷ್ಟು ದಾಸ್ತಾನು ಇದೆ ಎಂದು ಹೇಳಿತ್ತು ಆದರೆ ಸರಕಾರದ ಹೇಳಿಕೆ ನಿಜವಾಗಿರಲಿಲ್ಲ ಎಂಬುದು ಎರಡನೇ ಅಲೆ ವೇಳೆ ಸಾಬೀತಾಗಿತ್ತು" ಎಂದು ಸಮಿತಿ ಹೇಳಿದೆ

              "ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಹಲವು ಸಾವುಗಳು ಸಂಭವಿಸಿದ್ದರೂ ಸರಕಾರ ಅದನ್ನು ನಿರಾಕರಿಸಿರುವುದು ಅದಕ್ಕಿರುವ ಅನುಕಂಪದ ಕೊರತೆಯನ್ನು ತೋರಿಸುತ್ತದೆ" ಎಂದು ಸಮಿತಿ ಹೇಳಿದೆ.

            ಆಕ್ಸಿಜನ್ ಕೊರತೆಯ ಹೊರತಾಗಿ ಎರಡನೇ ಕೋವಿಡ್ ಅಲೆ ವೇಳೆ ಅತ್ಯಧಿಕ ಪ್ರಕರಣಗಳು, ಹೆಚ್ಚಿನ ಸಾವುಗಳು, ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಔಷಧಿಗಳ ಕೊರತೆ, ಆರೋಗ್ಯ ಸೇವೆಗಳಲ್ಲಿ ವ್ಯತ್ಯಯ, ಸಿಲಿಂಡರ್‍ಗಳು ಹಾಗೂ ಔಷಧಿಗಳ ಅಕ್ರಮ ದಾಸ್ತಾನು ಹಾಗೂ ಕಾಳಧನದಲ್ಲಿ ಮಾರಾಟ ಕೂಡ ಸಮಸ್ಯೆ ಸೃಷ್ಟಿಸಿದ್ದವು ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries