ಕೊಚ್ಚಿ: ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ರಾಫಿಕ್ ಜಾಮ್ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆರೋಪ ಸಾಬೀತುಪಡಿಸಲು ದಾಖಲೆಗಳನ್ನು ಸಲ್ಲಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂಬ ಕಾರಣಕ್ಕಾಗಿ ಅರ್ಜಿಯನ್ನು ವಜಾಗೊಳಿಸಲಾಗಿದೆ. ಪ್ರಯಾಣ ಶಾಂತಿಯುತವಾಗಿ ಸಾಗುತ್ತಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಅಕ್ರಮ ಚಟುವಟಿಕೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಅಡ್ವ. ಕೆ ವಿಜಯನ್ ಅವರು ಅರ್ಜಿ ಸಲ್ಲಿಸಿದ್ದರು. ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಮೊದಲಾದವರು ಎದುರಾಳಿ ಕಕ್ಷಿಗಳನ್ನಾಗಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಟ್ರಾಫಿಕ್ ಜಾಮ್ ಆಗದಂತೆ ಪೋಲೀಸರಿಗೆ ಸೂಚಿಸಬೇಕು ಎಂಬುದು ಮನವಿಯಲ್ಲಿನ ಆಗ್ರಹವಾಗಿತ್ತು. ಮೆರವಣಿಗೆ ಒಂದು ಬದಿಯಲ್ಲಿ ಸಾಗಿದಾಗ ಮತ್ತೊಂದು ಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಭದ್ರತೆಗಾಗಿ ನೇಮಿಸಿರುವ ಪೆÇಲೀಸರ ವೆಚ್ಚವನ್ನು ಸಂಘಟಕರಿಂದ ವಸೂಲಿ ಮಾಡಬೇಕು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿತ್ತು.
ಭಾರತ್ ಜೋಡೋ ಪಾದಯಾತ್ರೆ ಮಲಪ್ಪುರಂ ಜಿಲ್ಲೆಯ ಪ್ರವಾಸದ 1 ನೇ ಹಂತ ಪೂರ್ಣಗೊಂಡಿದೆ. ಪುಲಮಂತೋಳಿನಿಂದ ಆರಂಭವಾದ ಪಯಣ ಪೂಪಾಳಂನಲ್ಲಿ ಕೊನೆಗೊಂಡಿತು. ಲೀಗ್ ನಾಯಕರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ನಿನ್ನೆ ಂಜೆ 4 ಗಂಟೆಗೆ ಪಾತಾಳಕಾಡ್‍ನಿಂದ ಪಂಡಿಕ್ಕಾಡ್‍ವರೆಗೆ 11 ಕಿಮೀ ಭಾರತ್ ಜೋಡೋ ಪಾದಯಾತ್ರೆ ಸಾಗಿಬಂತು.
ಭಾರತ್ ಜೋಡೋ ಯಾತ್ರೆ ಶಾಂತಿಯುತವಾಗಿದೆ ಎಂದ ಸರ್ಕಾರ: ಸಂಚಾರ ಅಡೆತಡೆ ಉಂಟುಮಾಡುವ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್
0
ಸೆಪ್ಟೆಂಬರ್ 27, 2022
Tags