ಬದಿಯಡ್ಕ: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಬದಿಯಡ್ಕ ಘಟಕದ ಮಹಾಸಭೆ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಮಂಗಳವಾರ ನಡೆಯಿತು. ಬದಿಯಡ್ಕ ಘಟಕದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ವಲಯ ಅಧ್ಯಕ್ಷ ಸುನಿಲ್ ಮಂಜೇಶ್ವರ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಎಲ್ಲಾ ಸದಸ್ಯರೂ ಏಕ ಮನಸ್ಸಿನಿಂದ ಕಾರ್ಯಪ್ರವೃತ್ತರಾಗಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ವೃತ್ತಿಯೊಂದಿಗೆ ಜನಸೇವಾ ಕಾರ್ಯಗಳನ್ನೂ ಮಾಡಿದಾಗ ಸಮಾಜದಲ್ಲಿ ನಾವು ಗುರುತಿಸಲ್ಪಡುತ್ತೇವೆ. ಸಂಘಟನೆಯು ಬೆಳೆದರೆ ನಾವು ಬೆಳೆದಂತೆ ಎಂದರು.
ಕುಂಬಳೆ ವಲಯ ಕಾರ್ಯದರ್ಶಿ ಸುರೇಶ್ ಆಚಾರ್ಯ ಪೈವಳಿಕೆ, ಕೋಶಾಧಿಕಾರಿ ವೇಣುಗೋಪಾಲ ನೀರ್ಚಾಲು ಸಂಘಟನಾತ್ಮಕ ವಿಚಾರಗಳನ್ನು ಮಾತನಾಡಿ ಮುಂದೆ ನಡೆಯಲಿರುವ ಕುಂಬಳೆ ವಲಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕರೆನೀಡಿದರು. ಕಾಸರಗೋಡು ಜಿಲ್ಲಾ ಸಮಿತಿ ಕೋಶಾಧಿಕಾರಿ ವೇಣು ಕುಂಬಳೆ ಶುಭಹಾರೈಸಿದರು. ಬದಿಯಡ್ಕ ಘಟಕ ಕಾರ್ಯದರ್ಶಿ ಶ್ಯಾಮಪ್ರಸಾದ ಸರಳಿ ಸ್ವಾಗತಿಸಿ, ವರದಿ ಮಂಡಿಸಿದರು. ಕೋಶಾಧಿಕಾರಿ ಬಾಲಕೃಷ್ಣ ನಿಡುಗಳ ಲೆಕ್ಕಪತ್ರ ಮಂಡಿಸಿದರು. ಉದಯ ಕುಮಾರ್ ಮೈಕುರಿ ವಂದಿಸಿದರು. ಸೀತಾಂಗೋಳಿ, ಪೆರ್ಲ, ಬದಿಯಡ್ಕ, ನೀರ್ಚಾಲು ಭಾಗದ ಎಕೆಪಿಎ ಸದಸ್ಯರು ಪಾಲ್ಗೊಂಡಿದ್ದರು.
ಛಾಯಾಗ್ರಾಹಕರ ಸಂಘಟನೆಯ ಬದಿಯಡ್ಕ ಘಟಕ ಮಹಾಸಭೆ
0
ಸೆಪ್ಟೆಂಬರ್ 08, 2022