ಕಾಸರಗೋಡು: ಕೇರಳ ಕ್ರಿಕೆಟ್ ಅಸೋಸಿಯೇಶನ್ ಒಡೆತನದ ಮಾನ್ಯದಲ್ಲಿರುವ ಕ್ರಿಕೆಟ್ ಸ್ಟೇಡಿಯಂಟಿ ಅಕ್ರಮ ನಿರ್ಮಾಣ ಮತ್ತು ಅತಿಕ್ರಮಣ ಆರೋಪದಡಿ ಕೆಡವಲು ಬದಿಯಡ್ಕ ಪಂಚಾಯತ್ ಕಾರ್ಯದರ್ಶಿಯ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
22ರ ಬೆಳಗ್ಗೆ 11 ಗಂಟೆಯೊಳಗೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಬದಿಯಡ್ಕ ಪಂಚಾಯಿತಿ ಕಾರ್ಯದರ್ಶಿಗೆ ಸೂಚಿಸಲಾಗಿದೆ. 2020ರ ಜನವರಿಯಲ್ಲಿ ಕಾಸರಗೋಡು ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡುವಂತೆ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶಕ್ಕೂ ಹೈಕೋರ್ಟ್ ತಡೆ ನೀಡಿತ್ತು. ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಹೈಕೋರ್ಟ್ ಈ ಮೂಲಕ ಅನುಮತಿ ನೀಡಿದೆ.
ಮಾನ್ಯ ಕೆಸಿಎ ಸ್ಟೇಡಿಯಂ ಧ್ವಂಸಕ್ಕೆ ಹೈಕೋರ್ಟ್ ತಡೆಯಾಜ್ಞೆ
0
ಸೆಪ್ಟೆಂಬರ್ 22, 2022