ಲಂಡನ್: ರಾಣಿ ಎಲಿಝಬೆತ್ ಅವರ ಸರಕಾರಿ ಅಂತ್ಯಕ್ರಿಯೆಯ ಮೊದಲು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರವಿವಾರ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದರು(President Droupadi Murmu Meets King Charles).
ರಾಷ್ಟ್ರಪತಿ ಮುರ್ಮು ಅವರು ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆ ಬಳಿಯ ಲ್ಯಾಂಕಾಸ್ಟರ್ ಹೌಸ್‌ನಲ್ಲಿ ರಾಣಿ ಎಲಿಝಬೆತ್ II ರ ನಿಧನದ ಸಂತಾಪ ಪುಸ್ತಕಕ್ಕೆ ಸಹಿ ಹಾಕಿದರು.
"ರಾಷ್ಟ್ರಪತಿ ದ್ರೌಪದಿ ಮುರ್ಮು ಲಂಡನ್‌ನ ಲ್ಯಾಂಕಾಸ್ಟರ್ ಹೌಸ್‌ನಲ್ಲಿ ಹರ್ ಮೆಜೆಸ್ಟಿ ರಾಣಿ ಎಲಿಝಬೆತ್ II ರ ನೆನಪಿಗಾಗಿ ಸಂತಾಪ ಪುಸ್ತಕಕ್ಕೆ ಸಹಿ ಹಾಕಿದ್ದಾರೆ" ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.
ಇದಲ್ಲದೆ, ರಾಷ್ಟ್ರಪತಿ ಅವರು ಲಂಡನ್‌ನ ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ಇರಿಸಲಾಗಿರುವ ರಾಣಿ ಎಲಿಝಬೆತ್ II ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.
ರಾಷ್ಟ್ರಪತಿ ಅವರು ಸೆಪ್ಟೆಂಬರ್ 17 ರಿಂದ 19 ರವರೆಗೆ ಬ್ರಿಟನ್ ಗೆ ಅಧಿಕೃತ ಪ್ರವಾಸದಲ್ಲಿದ್ದು ಸೋಮವಾರ ರಾಣಿ ಎಲಿಝಬೆತ್ II ರ ಸರಕಾರಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮತ್ತು ಭಾರತ ಸರಕಾರದ ಪರವಾಗಿ ಸಂತಾಪ ಸೂಚಿಸಲು ತೆರಳಿದ್ದಾರೆ.