ಕಣ್ಣೂರು: ಕಣ್ಣೂರು ಚಿತ್ತಾರಿಪರಂಬ ತನ್ನಕುಳಂಗರದಲ್ಲಿ ಹಾಲು ಕೊಡುವ ಹಸುವಿಗೆ ರೇಬಿಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಂಜಲಿಲ್ ನಿವಾಸಿ ಅನಿತಾ ಎಂಬವರ ಹಾಲು ನೀಡುವ ಹಸುವಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಂಗಳವಾರದಿಂದ ಹಸು ಚಡಪಡಿಸುತ್ತಿತ್ತು. ಜ್ವರ ಎಂದು ಭಾವಿಸಿ ಔಷಧ ನೀಡಲಾಯಿತು. ಆದರೆ ಅಸ್ವಸ್ಥತೆ ಕಡಿಮೆಯಾಗದಿದ್ದಾಗ, ಅವರು ಮತ್ತೆ ವೈದ್ಯರಲ್ಲಿ ಸಮಾಲೋಚಿಸಿದರು.
ನಂತರದ ಪರೀಕ್ಷೆಗಳಲ್ಲಿ ರೇಬೀಸ್ ಸೋಂಕು ದೃಢಪಟ್ಟಿದೆ. ಹಸುವಿಗೆ ಔಷಧಿ ನೀಡಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಸುವಿನ ಐದರ ಹರೆಯದ ಕರುವಿಗೆ ರೇಬಿಸ್ ವಿರುದ್ದ ಲಸಿಕೆ ನೀಡಲಾಗಿದ್ದು ಪ್ರತ್ಯೇಕವಾಗಿ ಇರಿಸಲಾಗಿದೆ. ಸೋಂಕಿತ ಹಸುವಿಗೆ ದಯಾಮರಣ ನೀಡಲು ನಿರ್ಧರಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುವರೆಂದು ತಿಳಿದುಬಂದಿದೆ.
ಹಾಲು ಕರೆಯುವ ಹಸುವಿಗೆ ರೇಬೀಸ್ ದೃಢ: ದಯಾಮರಣಕ್ಕೆ ಶಿಫಾರಸು
0
ಸೆಪ್ಟೆಂಬರ್ 14, 2022
Tags