ಮುಳ್ಳೇರಿಯ: ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಹಾಗೂ ಸೇವಾಭಾರತಿ ಕಾಸರಗೋಡು ಇದರ ಸಹಯೋಗದೊಂದಿಗೆ ನರೇಂದ್ರ ಮೋದಿಯವರ 72ನೇ ಜನ್ಮದಿನಾಚರಣೆಯ ಪ್ರಯುಕ್ತ ಓಂಕಾರ್ ಯುವಕ ಸಂಘ ಬೆಳ್ಳೂರು ಇದರ ನೇತೃತ್ವದಲ್ಲಿ ರಕ್ತದಾನ ಶಿಬಿರವು ಜಿ ಎಚ್ ಯಸ್ ಯಸ್ ಬೆಳ್ಳೂರು ಶಾಲೆಯಲ್ಲಿ ಭಾನುವಾರ ನಡೆಯಿತು.
ಓಂಕಾರ್ ಯುವಕ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಭೆ ನಡೆಯಿತು. ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಎಂ. ಉದ್ಘಾಟಿಸಿದರು. ಸೇವಾಭಾರತಿಯ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಸಂತೋμï ಸಿ ಎನ್, ಬಿಜೆಪಿ ಬೆಳ್ಳೂರು ಪಂಚಾಯತಿ ಘಟಕದ ಅಧ್ಯಕ್ಷ ಜಯಾನಂದ ಕುಳ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣೇಶ್ ಪ್ರಸಾದ್ ಸ್ವಾಗತಿಸಿ, ಕೀರ್ತನ್ ಕಡೆಂಗ ವಂದಿಸಿದರು.
ಮೋದಿ ಜನ್ಮದಿನ: ಬೆಳ್ಳೂರಲ್ಲಿ ರಕ್ತದಾನ ಶಿಬಿರ
0
ಸೆಪ್ಟೆಂಬರ್ 19, 2022