ನವದೆಹಲಿ: ನಿಷೇಧಿತ ನಕ್ಸಲ್ ಭಯೋತ್ಪಾದಕ ಸಂಘಟನೆಗೆ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ.ಆಂಧ್ರಪ್ರದೇಶ ಮೂಲದ ಕಂಬಂಪತಿ ಚೈತನ್ಯ ಮತ್ತು ವಾಲಗುಟ್ಟ ಆಂಜನೇಲು ವಿರುದ್ಧ ಎರ್ನಾಕುಳಂನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಆರೋಪಿಗಳು ಕಮ್ಯುನಿಸ್ಟ್ ನಕ್ಸಲ್ ಭಯೋತ್ಪಾದಕ ಸಂಘಟನೆಗೆ ಯುವಕರನ್ನು ನೇಮಿಸಿ ತರಬೇತಿ ನೀಡುತ್ತಿದ್ದರು. ಭಯೋತ್ಪಾದಕ ಸಂಘಟನೆಯ ವಿಚಾರಗಳನ್ನು ಬಿತ್ತರಿಸಲು ಶಿಬಿರಗಳನ್ನೂ ನಡೆಸುತ್ತಿದ್ದರು. ಆರೋಪಿಗಳು ಇನ್ನೂ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿರುವುದು ತನಿಖೆಯಿಂದ ಸ್ಪಷ್ಟವಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎನ್‍ಐಎ ತಿಳಿಸಿದೆ.
ವಯನಾಡು ಮೂಲದ ಶ್ರೀಕಾಂತ್, ಆಂಧ್ರಪ್ರದೇಶದ ಕ್ರಾಂತಿಕಾರಿ ಸಂಘಟನೆಯ ಲೇಖಕರಾದ ಪಿನಾಕಾ ಪಾಣಿ ಮತ್ತು ವರಲಕ್ಷ್ಮಿ ಅವರು ಆರೋಪಿಗಳ ಸೂಚನೆ ಮೇರೆಗೆ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ದೇಶದ ಭದ್ರತೆ ಮತ್ತು ಏಕತೆಗೆ ಧಕ್ಕೆ ಬರುವಂತಹ ರೀತಿಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಎನ್ ಐಎ ವಕ್ತಾರರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಎನ್‍ಐಎ ದಾಖಲಿಸಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಷೇಧಿತ ಕಮ್ಯುನಿಸ್ಟ್ ನಕ್ಸಲ್ ಭಯೋತ್ಪಾದಕ ಸಂಘಟನೆಗೆ ಯುವಕರ ನೇಮಕಾತಿ ಪ್ರಕರಣ; ಆರೋಪಪಟ್ಟಿ ಸಲ್ಲಿಸಿದ ಎನ್‍ಐಎ
0
ಸೆಪ್ಟೆಂಬರ್ 04, 2022