ಮಂಜೇಶ್ವರ : ಅಡಕಳಕಟ್ಟೆಯ ಪ್ರೆಂಡ್ಸ್ ಕ್ಲಬ್ ಇದರ 13 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗಣೇಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.
ಸಮಾರಂಭದ ಅಂಗವಾಗಿ ನಡೆದ ವಿವಿಧ ಆಟೋಟ ಸ್ಪರ್ಧೆಗಳನ್ನು ರಮೇಶ್ ಅಡೆಕಳಕಟ್ಟೆ ಉದ್ಘಾಟಿಸಿದರು. ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ ಅಡೆಕಳ ವಹಿಸಿದ್ದರು. ಧಾರ್ಮಿಕ ಮುಂದಾಳು ಕೃಷ್ಣ ಶಿವಕೃಪ ಕುಂಜತ್ತೂರು ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, 'ಮಕ್ಕಳು ತಮ್ಮ ಹೆತ್ತವರಲ್ಲಿ ದೇವರನ್ನು ಕಾಣಬೇಕು. ಹೆತ್ತವರು ತಮ್ಮ ಮಕ್ಕಳಿಗೆ ಸನಾತನ ಹಿಂದೂ ಸಂಸ್ಕøತಿಯ ಭವ್ಯ ಪರಂಪರೆಯನ್ನು ವರ್ಗಾಯಿಸಿ ಉಳಿಸಿ ಬೆಳೆಸಬೇಕು' ಎಂದು ಕರೆಯಿತ್ತರು.
ಕಾರ್ಯಕ್ರಮದಲ್ಲಿ ಕೊಡ್ಲಮೊಗರು ಶ್ರೀ ವಾಣೀ ವಿಜಯ ಎ.ಯು. ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸರಳ, ನಿವೃತ್ತ ಶಿಕ್ಷಕ ಶ್ರೀನಿವಾಸ್ ಭಟ್ ಸೇರಾಜೆ ಉಪಸ್ಥಿತರಿದ್ದರು. ಕುಮಾರಿ ಯಜ್ಞಶ್ರೀ ಕ್ಲಬ್ಬಿನ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ವಿತರಿಸಲಾಯಿತು. ಸತೀಶ್ ಸುವರ್ಣ ಸ್ವಾಗತಿಸಿ, ಜಯಪ್ರಶಾಂತ್ ವಂದಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.