ಕೊಚ್ಚಿ: ಪಾಪ್ಯುಲರ್ ಫ್ರಂಟ್ ಹರತಾಳ ಗೊಂದಲ, ಗಲಾಟೆಗಳ ಗೂಡಾಗಿದ್ದರೂ ಎಲ್ಲವೂ ನಿಯಂತ್ರಣದಲ್ಲಿದೆ ಎಂದು ರಾಜ್ಯ ಪೋಲೀಸ್ ಮುಖ್ಯಸ್ಥರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹರತಾಳದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳಿಗೆ ಡಿಜಿಪಿ ಅನಿಲಕಾಂತ್ ಸೂಚನೆ ನೀಡಿದ್ದು, ಹಲವೆಡೆ ವ್ಯಾಪಕ ಹಿಂಸಾಚಾರ ನಡೆದಿದ್ದು, ಪೋಲೀಸರು ನಿಯಂತ್ರಣ ಕ್ರಮ ಕೈಗೊಂಡರು.
ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ಅವರು ಹೇಳಿದರು. ಸಮಸ್ಯೆ ಇರುವ ಕಡೆ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪಿಎಫ್‍ಐ ಕಚೇರಿಗಳ ಮೇಲೆ ಎನ್‍ಐಎ ದಾಳಿ ನಡೆಸಿ ಮುಖಂಡರನ್ನು ಬಂಧಿಸಿದ ಬಳಿಕ ಹರತಾಳ ಘೋಷಿಸಲಾಗಿತ್ತು. ಹರತಾಳ ಸಂದರ್ಭದಲ್ಲಿ ಉದ್ವಿಗ್ನತೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರೂ ಹಿಂಸಾಚಾರ ತಡೆಯಲು ಪೆÇಲೀಸರು ಯಾವುದೇ ಮಹತ್ವದ ಕ್ರಮ ಕೈಗೊಂಡಿರಲಿಲ್ಲ.
ತಿರುವನಂತಪುರ ಕಾಟ್ಟಾಕಡದಲ್ಲಿ ಪ್ರತಿಭಟನಾಕಾರರ ಮುಂದೆ ವೃದ್ದರೋರ್ವರು ಪ್ರತಿಭಟನೆ ನಡೆಸಿ, ಬಸ್‍ಗಳ ಸೇವೆಗೆ ಒತ್ತಾಯಿಸಿದರು. ಈ ವೇಳೆ ಪೋಲೀಸರು ಪ್ರೇಕ್ಷಕರಂತೆ ನೋಡುತ್ತಿದ್ದರು. ಕೋರ್ಟ್ ಕೂಡ ಹರತಾಳವನ್ನು ತೀವ್ರವಾಗಿ ಟೀಕಿಸಿತ್ತು. ಮಿಂಚಿನ ಹರತಾಳ ಕಾನೂನು ಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹರತಾಳಕ್ಕೆ ಕರೆ ನೀಡಿದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣವೂ ದಾಖಲಾಗಿದೆ.
ಮಧ್ಯಂತರ ಆದೇಶದಲ್ಲಿ, ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ ನ್ಯಾಯಾಲಯವು ಸಾರ್ವಜನಿಕ ಸಾರಿಗೆಗೆ ಭದ್ರತೆಯನ್ನು ಒದಗಿಸುವಂತೆ ಪೋಲೀಸರಿಗೆ ಸೂಚಿಸಿದೆ. ಮಿಂಚಿನ ಹರತಾಳಕ್ಕೆ ಕೋರ್ಟ್ 7 ದಿನಗಳ ನೋಟಿಸ್ ನೀಡದೆ ನಿμÉೀಧ ಹೇರಿದ್ದರೂ ಹರತಾಳಕ್ಕೆ ಕರೆ ನೀಡಿರುವ ಪಿಎಫ್ ಐ ಮುಖಂಡರ ಕ್ರಮ ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆ ಎಂದು ಹೈಕೋರ್ಟ್ ಹೇಳಿದೆ.
ಎಲ್ಲವೂ ನಿಯಂತ್ರಣದಲ್ಲಿದೆ; ಹರತಾಳ, ದಾಳಿಯ ನಡುವೆಯೂ ಪೋಲೀಸ್ ಮುಖ್ಯಸ್ಥರಿಂದ ಹೇಳಿಕೆ
0
ಸೆಪ್ಟೆಂಬರ್ 23, 2022