ಪೆರ್ಲ:ಬೆದ್ರಂಪಳ್ಳ ಬಾಂಡೀಲ್ ಬಸ್ ನಿಲ್ದಾಣ ಪರಿಸರದಲ್ಲಿ ಹಗಲು ರಾತ್ರಿ ಬೀದಿನಾಯಿಗಳು ಗುಂಪುಗೂಡುತ್ತಿದ್ದು ಜನರಿಗೆ ನಡೆದಾಡಲು ಭಯಪಡುವಂತಾಗಿದೆ.
ದಿನನಿತ್ಯ ಶಾಲಾ ಮಕ್ಕಳು, ಮಹಿಳೆಯರು ಕೆಲಸಕಾರ್ಯಗಳಿಗೆ ತೆರಳುವ ಜನರು ಈ ಪರಿಸರದಲ್ಲಿ ಅಧಿಕರಿದ್ದು ಇದೀಗ ಬೀದಿನಾಯಿಗಳ ಕಾಟದಿಂದ ಪರದಾಡುವಂತಾಗಿದೆ. ಇಲ್ಲಿನ ರಸ್ತೆ ತುಂಬಾ ತಿರುವುಮುರುವಾಗಿದ್ದು, ಒಮ್ಮಿಂದೊಮ್ಮೆಗೆ ಧುತೆಂದು ವಾಹನಗಳ ಎದುರು ಜಿಗಿಯುವ ನಾಯಿಗಳ ಕಾಟದಿಂದ ಅಪಘಾತಗಳು ಸಂಭವಿಸುತ್ತಿವೆ.
ಬೀದಿನಾಯಿ ಹಾವಳಿ ನಿಯಂತ್ರಿಸಿ ಮುಂದೆ ನಡೆಯಬಹುದಾದ ದೊಡ್ಡ ಅಪಾಯವನ್ನು ತಡೆಯಲು ಅಧಿಕೃತರು ಮುಂದಾಗಬೇಕೆಂದು ಊರವರು ಆಗ್ರಹಿಸಿದ್ದಾರೆ.
ಬೆದ್ರಂಪಳ್ಳ- ಬಾಂಡೀಲ್ ಪರಿಸರದಲ್ಲಿ ತೀವ್ರಗೊಂಡ ಬೀದಿನಾಯಿ ಕಾಟ
0
ಸೆಪ್ಟೆಂಬರ್ 19, 2022
Tags