ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷೆಯ ಭಾರತದ ಮೊದಲ ಸಮುದ್ರದೊಳಗಿನ ಸುರಂಗ ಮಾರ್ಗ ನಿರ್ಮಾಣದ ಕನಸು ಇನ್ನೇನು ನನಸಾಗಲಿದೆ. ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಸುರಂಗ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ಬುಲೆಟ್ ಟ್ರೈನ್ಗಾಗಿ ನಿರ್ಮಾಣಗೊಳ್ಳುತ್ತಿರುವ ಈ ಸುರಂಗ ಮಾರ್ಗದ ನಕ್ಷೆ ಬಿಡುಗಡೆ ಮಾಡಲಾಗಿದೆ.
ಸಮುದ್ರದ ಏಳು ಕಿಲೋಮೀಟರ್ ಆಳದಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಾಣವಾಗುತ್ತಿರುವ ಈ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ನ್ಯೂ ಆಸ್ಟ್ರಿಯನ್ ಟರ್ನಿಂಗ್ ವಿಧಾನವನ್ನು ಬಳಸಿಕೊಳ್ಳಲಾಗುವುದು.
ಸುರಂಗವು ನೆಲದಿಂದ ಸರಿಸುಮಾರು 25 ರಿಂದ 65 ಮೀಟರ್ ಆಳದಲ್ಲಿರುತ್ತದೆ ಮತ್ತು ಅದರ ಬಿಂದುವು ಥಾಣೆ ಜಿಲ್ಲೆಯ ಶಿಳಪಾಟಾ ಬಳಿಯ ಪಾರ್ಸಿಕ್ ಬೆಟ್ಟದ 114 ಮೀಟರ್ ಕೆಳಗೆ ಇರುತ್ತದೆ. ಈ ಪರ್ವತದ ಕೆಳಗಿನ ಭಾಗಗಳಲ್ಲಿ ಸುರಂಗ ಮಾರ್ಗವನ್ನು ನೆಲದಡಿಯಲ್ಲಿ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ, 22 ಜುಲೈ 2022 ರಂದು ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.
ಸಾಮಾನ್ಯವಾಗಿ, ಸುರಂಗವನ್ನು ರಚಿಸಲು ಐದರಿಂದ ಆರು ಮೀಟರ್ ವ್ಯಾಸದ ಕಟ್ಟರ್ ಹೆಡ್ ಅನ್ನು ಬಳಸಲಾಗುತ್ತದೆ. ಆದರೆ ಹೈಸ್ಪೀಡ್ ರೈಲು ಹಾದುಹೋಗಬೇಕಿರುವ ಕಾರಣದಿಂದಾಗಿ 13.1 ಮೀಟರ್ ವ್ಯಾಸದ ಕಟ್ಟರ್ ಹೆಡ್ ಅನ್ನು ಬಳಸಲಾಗುತ್ತದೆ. 16 ಕಿ.ಮೀ ಉದ್ದದ ಈ ಸುರಂಗ ನಿರ್ಮಾಣಕ್ಕೆ ಮೂರು ಟನೆಲ್ ಬೋರಿಂಗ್ ಯಂತ್ರಗಳನ್ನು ಬಳಸಲಾಗುವುದು. ಇದರಲ್ಲಿ 5 ಕಿಲೋಮೀಟರ್ ಸುರಂಗವನ್ನು ನ್ಯೂ ಆಸ್ಟ್ರೇಲಿಯಾ ಟರ್ನಿಂಗ್ ವಿಧಾನ ಬಳಸಿ ಕೊರೆಯಲಾಗುವುದು. ಈ ಸುರಂಗವು ಏಳು ಕಿಲೋಮೀಟರ್ ಉದ್ದವಿರುತ್ತದೆ ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮದ ವಕ್ತಾರರಾದ ಸುಷ್ಮಾ ಗೌರ್ ಈ ಮಾಹಿತಿ ನೀಡಿದ್ದಾರೆ.