ಬದಿಯಡ್ಕ : ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದÀ ಪ್ರತಿಭಾನ್ವಿತ ಕಲಾವಿದರಿಂದ ಗಾನನೃತ್ಯ ವೈಭವ ಕಾರ್ಯಕ್ರಮ ನಡೆಯಿತು.
ಉದಯೋನ್ಮುಖ ಕಲಾವಿದರಾದ ಅಪರ್ಣಾ, ಸನುಷಾ ಸುನಿಲ್, ಅಹನಾ ಎಸ್ ರಾವ್, ಸನುಷಾ ಸುಧಾಕರನ್, ವಿಷ್ಣು ಸುಧಾಕರನ್, ವೈಗ, ಆದ್ಯಂತ್ ಅಡೂರು, ಉಮಾವತಿ, ಪ್ರಖ್ಯಾತ್ ಭಟ್, ತೇಜಸ್ವಿನಿ, ಉಷಾ ಸುಧಾಕರನ್, ವೈಶಾಕ್, ನಂದನ, ಧನ್ಯಶ್ರೀ, ಹರಿತ ಕುಮಾರಿ, ಸುಶ್ಮಿತಾ, ವಿಷ್ಣುಪ್ರಿಯ, ಭಾಸ್ಕರ್ ಅಡೂರು, ಹರೀಶ್ ಪಂಜಿಕಲ್ಲು, ಡಾ.ವಾಣಿಶ್ರಿ ಕಾಸರಗೋಡು, ಗುರುರಾಜ್ ಕಾಸರಗೋಡು ವಿವಿಧ ಕಲಾ ಪ್ರಕಾರಗಳಲ್ಲಿ ಸಹಕರಿಸಿದ್ದರು. ಭಾಗವಹಿಸಿದ್ದ ಎಲ್ಲಾ ಕಲಾವಿದರಿಗೆ ಪ್ರಕೃತಿ ಕಲಾ ಸರಸ್ವತಿ ಗೌರವ ನೀಡಿ ಮಲ್ಲ ದುರ್ಗಾಪರಮೇಶ್ವರಿ ಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಆಶೀರ್ವದಿಸಿದರು.
ಸಂಘಟನೆಯ ನಿರ್ದೇಶಕಿ ಡಾ.ವಾಣಿಶ್ರೀ ಕಾಸರಗೋಡು ಹಾಗೂ ಗುರುರಾಜ್ ಕಾಸರಗೋಡು ಅವರಿಗೆ ಮಲ್ಲ ಶ್ರೀದೇವರ ಭಾವಚಿತ್ರವನ್ನು ನೀಡಿ ಆಶೀರ್ವದಿಸಿದರು. ಕಾರ್ಯಕ್ರಮವನ್ನು ನೂರಾರು ಮಂದಿ ಭಕ್ತಾಧಿಗಳು ವೀಕ್ಷಿಸಿದರು. ಇದೇ ತಂಡದ ಸದಸ್ಯರಿಂದÀ ಸಾಹಿತ್ಯ ಕಾರ್ಯಕ್ರಮವು ಸೆ.29ರಂದು ಕುಂಬಾಶಿ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಸೆ.30ರಂದು ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ, ಅ.1ರಂದು ಮಧೂರಿನ ಕಾಳಿಕಾಂಬಾ ಮಠ, ಅ.2ರಂದು ಕೂಟತ್ತಜೆಯ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ ಹಾಗೂ ಅ.5ರಂದು ನಲ್ಕದ ವಾಗ್ದೇವಿ ಸೇವಾ ಸಮಿತಿಯ ವಿಜಯದಶಮಿ ವೇದಿಕೆಯಲ್ಲಿ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.