ಕಾಸರಗೋಡು: ಜಿಲ್ಲಾ ಪ್ರಾಣಿ ಕಲ್ಯಾಣ ಇಲಾಖೆ, ಕಾಸರಗೋಡು ಸರಕಾರಿ ಕಾಲೇಜು ಎನ್‍ಎಸ್‍ಎಸ್ ಘಟಕ ಹಾಗೂ ಭಾರತೀಯ ಪಶುವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಸಾಕು ಪ್ರಾಣಿಗಳಿಗೆ ಲಸಿಕೆ ಹಾಕುವ ಸಂದೇಶದೊಂದಿಗೆ ಫ್ಲ್ಯಾμïಮೊಬ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರೇಬಿಸ್ ಮುಕ್ತ ಯೋಜನೆಯ ಭಾಗವಾಗಿ ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೆ ಪಶು ಆಸ್ಪತ್ರೆಗಳಿಂದ ರೇಬಿಸ್ ಲಸಿಕೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫ್ಲಾಶ್ ಮಾಬ್ ನಡೆಸಲಾಯಿತು.
ಕಾಸರಗೋಡು ಮುನ್ಸಿಪಲ್ ಬಸ್ ನಿಲ್ದಾಣ ಮತ್ತು ಚೆರ್ಕಳ ಬಸ್ ನಿಲ್ದಾಣದಲ್ಲಿ ಫ್ಲ್ಯಾಶ್ ಮಾಬ್ ಪ್ರದರ್ಶನಗೊಂಡಿತು. ಕಾಸರಗೋಡು ಸರಕಾರಿ ಕಾಲೇಜಿನ ಸುಮಾರು 20 ಎನ್‍ಎಸ್‍ಎಸ್ ಸ್ವಯಂಸೇವಕರು ಫ್ಲಾಶ್ ಮಾಬ್‍ನಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಪಶು ಸಂರಕ್ಷಣಾಧಿಕಾರಿ ಡಾ.ಬಿ.ಸುರೇಶ್ ಯೋಜನೆ ಬಗ್ಗೆ ವಿವರಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಆಶಲತಾ, ರೇಬೀಸ್ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ.ಮುರಳಿ, ಡಾ.ಚಂದ್ರಬಾಬು ಮೊದಲಾದವರು ಮಾತನಾಡಿದರು. ಭಾರತೀಯ ಪಶುವೈದ್ಯಕೀಯ ಸಂಘ ಕಾಸರಗೋಡು ಜಿಲ್ಲಾಧ್ಯಕ್ಷ ಡಾ.ಪ್ರದೀಪ್ ಕುಮಾರ್ ಸ್ವಾಗತಿಸಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಸುನೀಲ್ ನಂದಿ ವಂದಿಸಿದರು.