ಕಾಸರಗೋಡು: ಮಂಜೇಶ್ವರ ಸೂಫಿಗುರಿಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಬೆಳಗಾವಿ ನಿವಾಸಿ ಬಸಪ್ಪ(50)ಅವರ ಮೃತದೇಹದ ಅಂತ್ಯಕ್ರಿಯೆಯನ್ನು ಮಂಗಲ್ಪಾಡಿ ಸೇವಾ ಭಾರತೀ ಸದಸ್ಯರು ನಡೆಸಿದ್ದಾರೆ. ಸಾವಿನ ಬಗ್ಗೆ ಮಾಹಿತಿ ಪಡೆದು, ಬಸಪ್ಪ ಅವರ ಕುಟುಂಬ ಸದಸ್ಯರು ಮಂಜೇಶ್ವರಕ್ಕೆ ಆಗಮಿಸಿದ್ದರೂ, ಮೃತದೇಹ ಊರಿಗೆ ಕೊಂಡೊಯ್ಯುವಲ್ಲಿ ಆರ್ಥಿಕ ಅಡಚಣೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಸೇವಾ ಭಾರತಿ ಅಂತ್ಯಕ್ರಿಯೆ ನಡೆಸಲು ಮುಂದಾಗಿತ್ತು.
ಇದಕ್ಕೆ ಸಂಬಂಧಿಕರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಉಪ್ಪಳ ಐಲದ ಶಿವಾಜಿನಗರದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಪೊಲೀಸ್ ಹಾಗೂ ಸಂಬಂಧಿಕರ ಉಪಸ್ಥಿತಿಯಲ್ಲಿ ದಫನಗೈಯಲಾಗಿದೆ. ಬಸಪ್ಪ ಅವರ ಮೃತದೇಹ ಇವರು ಕೂಲಿ ಕೆಲಸ ಮಾಡುತ್ತಿದ್ದ ಕೃಷಿಕರೊಬ್ಬರ ಮನೆಯಿಂದ ಅಲ್ಪ ದೂರದ ರಸ್ತೆಬದಿ ಪತ್ತೆಯಾಗಿತ್ತು.