ಮಂಜೇಶ್ವರ: ಶ್ರೀ ಮಹಾಗಣಪತಿ ಭಜನಾ ಸಂಘ ಮದಂಗಲ್ಲು ಕಟ್ಟೆ ಸಾರ್ವಜನಿಕ ಗಣೇಶೋತ್ಸವದ ಸಲುವಾಗಿ ಇತ್ತೀಚೆಗೆ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಯಕ್ಷಗಾನ ತಾಳಮದ್ದಳೆ ದುರ್ವಾಸಾತಿಥ್ಯ ಪ್ರಸ್ತುತಿಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕೇಶವ ಪ್ರಸಾದ್ ಶಿರಂತಡ್ಕ, ಚೆಂಡೆ ಮದ್ದಳೆಯಲ್ಲಿ ಭಾಸ್ಕರ ಕೋಳ್ಯೂರು, ರಾಮ ಹೊಳ್ಳ ಸುರತ್ಕಲ್ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು(ಕೌರವ), ಗುರುರಾಜ ಹೊಳ್ಳ ಬಾಯಾರು(ದುರ್ವಾಸ), ಯೋಗೀಶ ರಾವ್ ಚಿಗುರುಪಾದೆ(ಶ್ರೀಕೃಷ್ಣ), ಗಣೇಶ ನಾವಡ ಮೀಯಪದವು(ದೌಮ್ಯ), ಅವಿನಾಶ ಹೊಳ್ಳ ವರ್ಕಾಡಿ(ಧರ್ಮರಾಯ), ಮಮತಾ ನಾವಡ ಮಜಿಬೈಲು(ದ್ರೌಪದಿ) ಭಾಗವಹಿಸಿದ್ದರು.
ಮದಂಗಲ್ಲು ಗಣೇಶೋತ್ಸವದಲ್ಲಿ ರಂಜಿಸಿದ ಗುರುನರಸಿಂಹ ತಂಡದ ದುರ್ವಾಸಾತಿಥ್ಯ
0
ಸೆಪ್ಟೆಂಬರ್ 07, 2022