ಕಣ್ಣೂರು: ಲವ್ ಜಿಹಾದ್ ವಿರುದ್ಧ ತಲಶ್ಶೇರಿ ಆರ್ಚ್‍ಡಯಾಸಿಸ್ ಅಭಿಯಾನಕ್ಕೆ ಮುಂದಾಗಿದೆ. ಭಾನುವಾರ ಮಕ್ಕಳಿಗೆ ಮತ್ತು ಪೋಷಕರಿಗೆ ಜಾಗೃತಿ ತರಗತಿ ನಡೆಸಲು ತೀರ್ಮಾನಿಸಿದೆ.
ಆರ್ಚ್ ಡಯಾಸಿಸ್ ಆರ್ಚ್ ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ ಮಾಧ್ಯಮಗಳೊಂದಿಗೆ ಮಾತನಾಡಿ, ಆರ್ಚ್ ಡಯಸಿಸ್ ನಲ್ಲಿ ಧಾರ್ಮಿಕ ಮತಾಂತರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಜಾರಿಗೊಳಿಸಲಾಗುತ್ತಿದೆ ಎಂದಿರುವರು.
ಪ್ರೇಮದ ನೆಪದಲ್ಲಿ ಹುಡುಗಿಯರನ್ನು ವಂಚಿಸಿ ಮತಾಂತರ ಮಾಡುವ ಘಟನೆಗಳು ಹೆಚ್ಚುತ್ತಿವೆ. ಹಿಂದೂ ಮತ್ತು ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದ ಹುಡುಗಿಯರು ಹೆಚ್ಚು ಬಲಿಪಶುಗಳಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ತಲಶ್ಶೇರಿ ಆಚ್ರ್ಡಯಾಸಿಸ್ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿತು.
ಭಾನುವಾರ, ಪ್ರಾರ್ಥನೆಯ ನಂತರ ಮಕ್ಕಳಿಗೆ ಮತ್ತು ಪೋಷಕರಿಗೆ ತರಗತಿಯನ್ನು ನೀಡಲಾಗುತ್ತದೆ. ಪೋಷಕರು ಮತ್ತು ಮಕ್ಕಳ ನಡುವಿನ ಸಂವಹನ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಅಭಿಯಾನದ ಪ್ರಮುಖ ವಿಷಯವಾಗಿದೆ. ಇದರೊಂದಿಗೆ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಮೂಡಿಸಲಾಗುವುದು. ಲವ್ ಜಿಹಾದ್ ಇಲ್ಲ ಎಂದು ಕಮ್ಯುನಿಸ್ಟ್ ಪಕ್ಷ ಹೇಳಿಕೊಂಡರೂ ಅದು ಅಲ್ಲ ಎಂಬುದನ್ನು ತಲಶ್ಶೇರಿ ಆರ್ಚ್‍ಡಯಾಸಿಸ್‍ನ ಪ್ರಚಾರ ಸಾಬೀತುಪಡಿಸುತ್ತದೆ.
ಲವ್ ಜಿಹಾದ್; ಜಾಗೃತಿ ಅಭಿಯಾನದತ್ತ ತಲಶ್ಚೇರಿ ಆಚ್ರ್ಡಯಸಿಸ್: ಭಾನುವಾರ ಮಕ್ಕಳಿಗೆ ಮತ್ತು ಪೋಷಕರಿಗೆ ಜಾಗೃತಿ ತರಗತಿ
0
ಸೆಪ್ಟೆಂಬರ್ 21, 2022