ಮಧೂರು: ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸೆ.11ರಂದು ಕನ್ನಡ ಗ್ರಾಮದಲ್ಲಿ ಜರಗುವ ಕಾಸರಗೋಡು ಜಿಲ್ಲಾ ಆರನೇ ಚುಟುಕು ಸಾಹಿತ್ಯ ಸಮ್ಮೇಳನದಂಗವಾಗಿ ಏರ್ಪಡಿಸಿದ ಅಂಚೆ ಕಾರ್ಡು ಚುಟುಕು, ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಅಂಚೆ ಕಾಡು ಚುಟುಕು ಸ್ಪರ್ಧೆಯಲ್ಲಿ ಮಂಗಳೂರು ವಿ.ವಿ.ಯ ಚಂದನಾ ಕೆ.ಎಸ್. ಮಂಗಳೂರು ಪ್ರಥಮ, ಕೋಡಿಕಲ್‍ನ ಸೌಮ್ಯ ಪ್ರವೀಣ್ ದ್ವಿತೀಯ, ಉಮೇಶ್ ಶಿರಿಯ ತೃತೀಯ ಸ್ಥಾನ ಪಡೆದಿದ್ದಾರೆ. ಸುಶೀಲಾ ಕೆ.ಪದ್ಯಾಣ, ಸೈಮನ್ ಎಸ್.ಮಡಿಕೇರಿ, ಆದ್ಯಂತ್ ಅಡೂರು ಪೆÇ್ರೀತ್ಸಾಹಕ ಬಹುಮಾನ ಗಳಿಸಿದ್ದಾರೆ.
ಅಂಚೆ ಕಾರ್ಡು ಕಥಾ ಸ್ಪರ್ಧೆಯಲ್ಲಿ ಮಾನಸ ವಿಜಯ್ ಕೈಂತಜೆ ಪ್ರಥಮ, ಶಶಿಕಲಾ ಕುಂಬಳೆ ದ್ವಿತೀಯ, ವಿಜಯಲಕ್ಷ್ಮಿ ಕಟ್ಟದಮೂಲೆ ತೃತೀಯ ಸ್ಥಾನ ಪಡೆದಿದ್ದಾರೆ. ಕೊ.ವಾ.ಶ್ರೀಕೃಷ್ಣ ಅಹಿತಾನಲ, ಹಿತೇಶ್ ಕುಮಾರ್ ಎ.ಕುಂಟಿಕಾನ, ರಾಧಾಕೃಷ್ಣ ಭಟ್ ಕುರುಮುಜ್ಜಿ ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಸೆ.11 ರಂದು ವೆಂಕಟ್ ಭಟ್ ಎಡನೀರು ಅವರ ಅಧ್ಯಕ್ಷತೆಯಲ್ಲಿ ಜರಗುವ ಕಾಸರಗೋಡು ಜಿಲ್ಲಾ ಆರನೆಯ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದೆಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.
ಅಂಚೆ ಕಾರ್ಡು ಚುಟುಕು, ಕಥಾ ಸ್ಪರ್ಧೆ ಫಲಿತಾಂಶ
0
ಸೆಪ್ಟೆಂಬರ್ 05, 2022