ಬದಿಯಡ್ಕ : ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಬೆಳ್ಳಿ ಹಬ್ಬ 2022 ನೇ ಡಿಸೆಂಬರ್ 24 ಮತ್ತು 25 ರಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಲ್ಲಿ ಜರುಗಲಿದೆ.
ಕಾರ್ಯಕ್ರಮದ ಮನವಿ ಪತ್ರ ಹಾಗು ಧನಸಹಾಯ ಕೂಪನ್ ಬಿಡುಗಡೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಬೆಳ್ಳಿ ಹಬ್ಬದ ಕಾರ್ಯಧ್ಯಕ್ಷ ಗೋಪಾಲ ಡಿ. ದರ್ಬೆತಡ್ಕ ಇವರ ಅಧ್ಯಕ್ಷತೆಯಲ್ಲಿ ರಾಜ್ಯಧ್ಯಕ್ಷ ಅಂಗಾರ ಅಜೆಕೋಡು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಹಾಧ್ಯಕ್ಷ ಹಾಗು ಬೆಳ್ಳಿ ಹಬ್ಬ ಆಚರಣಾ ಸಮಿತಿ ಅಧ್ಯಕ್ಷ ರಾಮಪ್ಪ ಮಂಜೇಶ್ವರ ಇವರು ಸಮುದಾಯ ಭಾಂದವರ ಸಮ್ಮುಖದಲ್ಲಿ ಮನವಿ ಪತ್ರ ಹಾಗು ಕೂಪನ್ ಬಿಡುಗಡೆಗೊಳಿಸಿದರು.ಬೆಳ್ಳಿ ಹಬ್ಬದ ಕುರಿತು ಕಾರ್ಯಕ್ರಮ ಗಳ ಬಗ್ಗೆ ವಿಶೇಷ ಮಾಹಿತಿಯನ್ನು ಪ್ರಧಾನ ಸಂಚಾಲಕರಾದ ಕೆ. ರವಿಕಾಂತ ಕೇಸರಿಕಡಾರು ಸಮುದಾಯದ ಭಾಂದವರ ಮುಂದೆ ಮಂಡಿಸಿದರು. ಕಾರ್ಯಕ್ರಮ ಯಶಸ್ವಿಯ ಕುರಿತು ಮತ್ತು ಕ್ರೀಡಾ ಕೂಟ ಸ್ಪರ್ಧೆ ಹಾಗು ಇನ್ನಿತರ ಸ್ಪರ್ಧೆಗಳ ಕುರಿತು ಸಮಗ್ರ ಚರ್ಚಿಸಿ ಉತ್ತಮ ಸಲಹೆ ಸೂಚನೆಗಳನ್ನು ಸಮುದಾಯದ ಭಾಂಧವರು ನೀಡಿ ಸಹಕರಿಸಿದರು.ಸಂಘಟನೆಯ ಪದಾಧಿಕಾರಿಗಳು, ಬೆಳ್ಳಿ ಹಬ್ಬದ ಸಮಿತಿ ಹಾಗು ಉಪಸಮಿತಿಗಳ ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಪ್ರಾದೇಶಿಕ ಸಮಿತಿ ಸದಸ್ಯರು ಹಿರಿಯ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸುಂದರಿ ಟೀಚರ್ ಮಾರ್ಪನಡ್ಕ ಪ್ರಾರ್ಥನೆ ಹಾಡಿದರು. ಜಿಲ್ಲಾ ಕಾರ್ಯದರ್ಶಿ ಹರಿಶ್ಚಂದ್ರ ಪುತ್ತಿಗೆ ಸ್ವಾಗತಿಸಿ ಕೋಶಾಧಿಕಾರಿ ಹರಿರಾಮ ಕುಳೂರು ವಂದಿಸಿದರು.