ಕಾಸರಗೋಡು: ನಗರಸಭೆಯ ಕಚೇರಿ ಚಟುವಟಿಕೆಗಳು ಸಂಪೂರ್ಣ ಡಿಜಿಟಲ್ ಆಗಿ ಬದಲಾಗಲಿದೆ. ನಗರಸಭೆಯ ಅಂಕಿ-ಅಂಶಗಳನ್ನು ಸಮೀಕ್ಷೆ ನಡೆಸಿ ಸಂಪೂರ್ಣ ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ನಗರಸಭೆಯ ಎಲ್ಲ ಮೂಲ ಮಾಹಿತಿ ಸಂಗ್ರಹಿಸಲಾಗುವುದು. ಜಿಯೋ-ಮಾಹಿತಿ ವ್ಯವಸ್ಥೆ ಎಂಬ ತಾಂತ್ರಿಕ ವ್ಯವಸ್ಥೆಯನ್ನು ಬಳಸಿಕೊಂಡು ಡೇಟಾ ಸಂಗ್ರಹಣೆಯನ್ನು ಮಾಡಲಾಗುತ್ತದೆ. ಎಲ್ಲ ಮನೆಗಳು, ಸಂಸ್ಥೆಗಳು, ರಸ್ತೆ, ಎಲೆಕ್ಟ್ರಿಕ್ ಪೆÇೀಸ್ಟ್, ನೀರಿನ ನಲ್ಲಿಗಳು, ಮಣ್ಣು ಮತ್ತು ನೀರಿನ ಸಂರಕ್ಷಣೆ ಸಂಬಂಧಿತ ಮಾಹಿತಿ, ಜಲಮೂಲಗಳು, ಪ್ರಸ್ತುತ ಕೃಷಿ, ವ್ಯಕ್ತಿಗಳ ಸಮಗ್ರ ಮಾಹಿತಿ ಮತ್ತು ನಗರಸಭೆಯಲ್ಲಿ ಅನುಷ್ಠಾನಗೊಂಡಿರುವ ಅಭಿವೃದ್ಧಿಗಳ ಅಂಕಿ ಅಂಶಗಳನ್ನು ಸಮೀಕ್ಷೆ ಮಾಡಿ ಡಿಜಿಟಲೀಕರಣಗೊಳಿಸಲಾಗುವುದು. ಪ್ರದೇಶದ ಸ್ವರೂಪ, ಪರಿಸರ, ಸಾಮಾಜಿಕ-ಆರ್ಥಿಕ ಮೂಲಸೌಕರ್ಯ ಮತ್ತು ಪ್ರಸ್ತುತ ಒದಗಿಸಿದ ಸೇವೆಗಳು ಇವೆಲ್ಲವನ್ನೂ ಸಮೀಕ್ಷೆಗೆ ಒಳಪಡಿಸಲಾಗುವುದು. ಭವಿಷ್ಯದಲ್ಲಿ, ಡಿಜಿಟಲೀಕರಣ ವ್ಯವಸ್ಥೆಯು ನಗರಸಭೆಯ ಎಲ್ಲಾ ಯೋಜನೆ, ಸಮನ್ವಯ ಮತ್ತು ಮೇಲ್ವಿಚಾರಣೆಯನ್ನು ನಿಖರವಾಗಿ ಕಾರ್ಯಗತಗೊಳಿಸಲು ಸಹಾಯ ಮಾಡಲಿದೆ.
ಕರಕುಳಂ ಗ್ರಾಮೀಣ ಅಧ್ಯಯನ ಕೇಂದ್ರವು ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ನೆರವು ನೀಡುತ್ತಿದೆ. ಕ್ಷೇತ್ರ ಸಮೀಕ್ಷೆ ನಡೆಸಲು ನಗರಸಭೆಯ ಪ್ರತಿ ವಾರ್ಡ್‍ನಿಂದ ಒಬ್ಬರನ್ನು ನೇಮಿಸಲಾಗುವುದು. ನಗರಸಭೆಯಲ್ಲಿಸಮೀಕ್ಷೆ ನಡೆಸಲು ಉಚಿತ ತರಬೇತಿ ನೀಡಲಾಗುವುದು, ಇದು ಆರೋಗ್ಯ ಕ್ಷೇತ್ರಕ್ಕೂ ಉಪಯುಕ್ತವಾಗಲಿದೆ. ಅಕ್ಟೋಬರ್ 1 ರಂದು ಡ್ರೋನ್ ಸಮೀಕ್ಷೆ ನಡೆಸಲಾಗುವುದು.
ಅಲ್ಲದೆ ಸಮೀಕ್ಷೆಯ ಮೂಲಕ ನಿಖರತೆಯ ಆಧಾರದ ಮೇಲೆ ನಗರಸಭೆಯಲ್ಲಿ ಕಟ್ಟಡ ಭೂ ಕಂದಾಯ ಮತ್ತು ಇತರ ಕಂದಾಯ ಆದಾಯಗಳನ್ನು ಸಂಗ್ರಹಿಸಲು ಸಾಧ್ಯವಿದೆ. ಕೃಷಿ ಭೂಮಿ, ಭೂಮಿಯ ಬಳಕೆ, ಅರಣ್ಯ, ಮಣ್ಣು, ಬಂಜರು ಭೂಮಿ, ಭೂಮಿಯ ಅವನತಿ, ಜಲಸಂಪನ್ಮೂಲ ಇತ್ಯಾದಿ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪ್ರಕೃತಿಯ ಸಮತೋಲನಕ್ಕೆ ಧಕ್ಕೆಯಾಗದಂತೆ ಸುಸ್ಥಿರ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲು ಸಾಧ್ಯವಾಗಲಿದೆ.
ಸಂಪೂರ್ಣ ಡಿಜಿಟಲೀಕರಣದತ್ತ ಕಾಸರಗೋಡು ನಗರಸಭೆ
0
ಸೆಪ್ಟೆಂಬರ್ 28, 2022
Tags