ಕಾಸರಗೋಡು: ಜಿಲ್ಲಾ ಪ್ರಾಣಿ ಕಲ್ಯಾಣ ಇಲಾಖೆ, ಕಾಸರಗೋಡು ಸರ್ಕಾರಿ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ಭಾರತೀಯ ಪಶುವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಸಾಕು ಪ್ರಾಣಿಗಳಿಗೆ ಲಸಿಕೆ ಹಾಕುವ ಸಂದೇಶದೊಂದಿಗೆ ಫ್ಲ್ಯಾಷ್‍ಮೊಬ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರೇಬೀಸ್ ಮುಕ್ತ ಕಾರ್ಯಕ್ರಮದ ಅಂಗಗವಾಗಿ, ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೆ ಪಶುವೈದ್ಯಕೀಯ ಆಸ್ಪತ್ರೆಗಳು ಮತ್ತು ಸ್ಥಳೀಯರಿಂದ ರೇಬೀಸ್ ಲಸಿಕೆ ನೀಡಲಾಗುತ್ತದೆ.ಸ್ವಾಯತ್ತ ಸಂಸ್ಥೆಗಳಿಂದ ಪರವಾನಗಿ ಪಡೆಯುವ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫ್ಲ್ಯಾಷ್‍ಮೋಬ್ ನಡೆಸಲಾಯಿತು. ಕಾಸರಗೋಡು ಮುನ್ಸಿಪಲ್ ಬಸ್ ನಿಲ್ದಾಣ ಮತ್ತು ಚೆರ್ಕಳ ಬಸ್ ನಿಲ್ದಾಣದಲ್ಲಿ ಫ್ಲ್ಯಾಶ್‍ಮೋಬ್ ಪ್ರದರ್ಶನಗೊಂಡಿತು. ಕಾಸರಗೋಡು ಸರ್ಕಾರಿ ಕಾಲೇಜಿನ ಸುಮಾರು 20 ಎನ್ನೆಸ್ಸೆಸ್ ಸ್ವಯಂಸೇವಕರು ಫ್ಲಾಶ್ ಮೋಬ್‍ನಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಪಶು ಸಂರಕ್ಷಣಾಧಿಕಾರಿ ಡಾ.ಬಿ.ಸುರೇಶ್ ಯೋಜನೆ ಬಗ್ಗೆ ಮಾಃಇತಿ ನೀಡಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಆಶಾಲತಾ, ರೇಬೀಸ್ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ.ಮುರಳಿ, ಡಾ.ಚಂದ್ರಬಾಬು ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲಾಧ್ಯಕ್ಷರು, ಭಾರತೀಯ ಪಶುವೈದ್ಯಕೀಯ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ಡಾ.ಪ್ರದೀಪ್ ಕುಮಾರ್ ಸ್ವಾಗತಿಸಿದರು. ಪಶುಪಾಲನಾ ಉಪನಿರ್ದೇಶಕ ಡಾ.ಸುನೀಲ್ ನಂದಿ ವಂದಿಸಿದರು.
ಫ್ಲ್ಯಾಶ್‍ಮೋಬ್ ಮೂಲಕ ಸಾಕು ಪ್ರಾಣಿಗಳ ವ್ಯಾಕ್ಸಿನೇಷನ್ ಅಭಿಯಾನ
0
ಸೆಪ್ಟೆಂಬರ್ 29, 2022
Tags