HEALTH TIPS

ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು: ಮೋದಿ

 

          ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಈಗ ಅವರ ಹೆಸರನ್ನು ಇಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ.

                   'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದರು.

                  'ಸೆ.28ರಂದು ಭಗತ್ ಸಿಂಗ್ ಅವರ ಜನ್ಮ ದಿನಾಚರಣೆ ರೂಪದಲ್ಲಿ ಮತ್ತೊಂದು ಮುಖ್ಯ ಅಮೃತ ಮಹೋತ್ಸವ ಬರುತ್ತಿದೆ. ಅವರ ಜನ್ಮ ವಾರ್ಷಿಕೋತ್ಸವಕ್ಕೂ ಮೊದಲು, ಅವರ ನೆನಪಿಗಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಚಂಡೀಗಢ ವಿಮಾನ ನಿಲ್ದಾಣಕ್ಕೆ ಹುತಾತ್ಮ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ' ಎಂದು ಮೋದಿ ಹೇಳಿದರು.

             'ಹವಾಮಾನ ಬದಲಾವಣೆಯು ಸಮುದ್ರ ಪರಿಸರ ವ್ಯವಸ್ಥೆಗೆ ಅಪಾಯವನ್ನು ಒಡ್ಡಿದೆ. ಕಡಲತೀರಗಳಲ್ಲಿನ ಕಸದಿಂದಾಗಿ ತೊಂದರೆ ಸೃಷ್ಟಿಯಾಗುತ್ತಿದೆ' ಎಂದು ಮೋದಿ ಹೇಳಿದರು.

                'ಈ ಸವಾಲುಗಳನ್ನು ಎದುರಿಸಲು ಗಂಭೀರ ಮತ್ತು ನಿರಂತರ ಪ್ರಯತ್ನಗಳನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ' ಎಂದು ಅವರು ಸಲಹೆ ನೀಡಿದರು. ಇದೇ ಕಾರ್ಯಕ್ರಮದಲ್ಲೇ ಮೋದಿ ಅವರು ಬಿಜೆಪಿ ಸಿದ್ಧಾಂತವಾದಿ ದೀನ್ ದಯಾಳ್ ಉಪಾಧ್ಯಾಯ ಅವರಿಗೆ ಗೌರವ ಸಲ್ಲಿಸಿದರು. ಅವರು ಅಪ್ರತಿಮ ಚಿಂತಕ ಮತ್ತು ದೇಶದ ಹೆಮ್ಮೆಯ ಪುತ್ರ' ಎಂದು ಬಣ್ಣಿಸಿದರು.130 ಕೋಟಿ ಭಾರತೀಯರು ಚೀತಾಗಳ ವಾಪಸಾತಿ ಬಗ್ಗೆ ಹೆಮ್ಮೆಪಟ್ಟಿದ್ದಾರೆ ಎಂದು ಮೋದಿ ಇದೇ ವೇಳೆ ಹೇಳಿದರು.

             'ಚೀತಾಗಳನ್ನು ನೋಡುವ ಅವಕಾಶ ಯಾವಾಗ ಲಭಿಸುತ್ತದೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಕಾರ್ಯಪಡೆಯು ಚೀತಾಗಳ ಕುರಿತು ನಿಗಾವಹಿಸಿ, ಇಲ್ಲಿನ ವಾತಾವರಣಕ್ಕೆ ಅವು ಹೇಗೆ ಹೊಂದಿಕೊಳ್ಳುತ್ತವೆ ಎಂಬುದರ ಅಧ್ಯಯನ ನಡೆಸಿ ವರದಿ ನೀಡುತ್ತದೆ. ಇದನ್ನು ಆಧರಿಸಿ ಕೆಲ ಕಾಲದ ನಂತರ ಕುರಿತು ನಿರ್ಣಯ ಕೈಗೊಳ್ಳಲಾಗುವುದು' ಎಂದು ಮೋದಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries