ಕಣ್ಣೂರು: ರಾಜ್ಯದಲ್ಲಿ ಡ್ರಗ್ಸ್ ಮಾರಾಟಗಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರನ್ನು ಬಲೆಗೆ ಬೀಳಿಸಲು ಹೊಸ ನಿರ್ಧಾರ ಕೈಗೊಳ್ಳಲಾಗಿದೆ.
ಮಾದಕ ದ್ರವ್ಯ ಪ್ರಕರಣಗಳಲ್ಲಿ ಪದೇ ಪದೇ ಬಂಧಿತರಾಗುವವರ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚಿಸಿದ್ದಾರೆ.
ಕಣ್ಣೂರಿನ ಪಿಣರಾಯಿಯಲ್ಲಿ ನೂತನವಾಗಿ ನಿರ್ಮಿಸಲಾದ ಅಬಕಾರಿ ಕಚೇರಿಯನ್ನು ಉದ್ಘಾಟಿಸಿ ಅವರು ಹೇಳಿಕೆ ನೀಡಿದ್ದಾರೆ. ಡ್ರಗ್ ಮಾಫಿಯಾಗಳು ಹೆಚ್ಚಾಗಿ ಶಾಲಾ-ಕಾಲೇಜುಗಳನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿವೆ. ಇದನ್ನು ತಡೆಯಲು ಶಾಲಾ ಪಿಟಿಎ, ಆಡಳಿತ ಮಂಡಳಿ, ಶಿಕ್ಷಕರು ಮುಂತಾದವರು ಸಹಕರಿಸಿದರೆ ಇಂತಹ ಚಟುವಟಿಕೆಗಳನ್ನು ತಡೆಯಬಹುದು ಎಂದರು.
ಇತ್ತೀಚೆಗೆ ಕೇರಳದಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ. ಪುರುಷ ಮತ್ತು ಮಹಿಳೆ ಎಂಬ ಭೇದವಿಲ್ಲದೆ ಈಗ ಮಾದಕ ವಸ್ತು ವ್ಯಾಪಾರ ನಡೆಯುತ್ತಿದೆ. ಹಲವು ಕುಟುಂಬಗಳು ಡ್ರಗ್ಸ್ ಮಾಫಿಯಾಗಳ ಬಲೆಗೆ ಬೀಳುತ್ತವೆ. ಹೆಣ್ಣುಮಕ್ಕಳು ಡ್ರಗ್ಸ್ ವಾಹಕಗಳಾಗುತ್ತಿರುವ ಪರಿಸ್ಥಿತಿ ಆಘಾತಕ್ಕೆ ಕಾರಣವಾಗಿದೆ. ಸಮಾಜ ಎಚ್ಚೆತ್ತುಕೊಳ್ಳದ ಹೊರತು ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದ ಅವರು, ಡ್ರಗ್ಸ್ ಮಾಫಿಯಾ ವಿರುದ್ಧ ಜನರೂ ಸರ್ಕಾರದ ಜೊತೆಗೂಡಿ ಹೋರಾಟಕ್ಕೆ ಸಿದ್ಧರಾಗಬೇಕು ಎಂದಿರುವರು.
ಡ್ರಗ್ ಪ್ರಕರಣಗಳಲ್ಲಿ ಸತತ ಸಿಕ್ಕಿಬಿದ್ದವರ ವಿರುದ್ಧ ಜಾಮೀನು ರಹಿತ ಸೆಕ್ಷನ್ ವಿಧಿಸಲಾಗುವುದು; ಮುಖ್ಯಮಂತ್ರಿ ಪಿಣರಾಯಿ ವಿಜಯನ್
0
ಸೆಪ್ಟೆಂಬರ್ 20, 2022