ತಿರುವನಂತಪುರ: ಕೆಎಸ್‍ಆರ್‍ಟಿಸಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಮಾದರಿಯನ್ನು ಅಧ್ಯಯನ ಮಾಡಲು ಹಣಕಾಸು ಇಲಾಖೆ ಮುಂದಾಗಿದೆ. ಕರ್ನಾಟಕ ಸಾರಿಗೆ ಸಂಸ್ಥೆ ಹೇಗೆ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಯೋಜನಾ ಮಂಡಳಿ ಸದಸ್ಯರಿಗೆ ಹಣಕಾಸು ಸಚಿವರು ತಿಳಿಸಿದ್ದಾರೆ. ಅಧ್ಯಯನಕ್ಕಾಗಿ ರಾಜ್ಯ ಯೋಜನಾ ಮಂಡಳಿ ಸದಸ್ಯ ನಮಶಿವಾಯಂ ಅಧ್ಯಕ್ಷತೆಯ ಸಮಿತಿಯನ್ನು ನೇಮಿಸಲಾಗಿದೆ.
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಲಾಭದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಸಮಿತಿ ಅಧ್ಯಯನ ನಡೆಸಲಿದೆ. ಸೇವೆಗಳು, ಟಿಕೆಟ್ ದರ, ನಿರ್ವಹಣಾ ವಿಧಾನ ಇತ್ಯಾದಿಗಳನ್ನು ಸಹ ಅಧ್ಯಯನ ಮಾಡಲಾಗುತ್ತದೆ. ಕೂಡಲೇ ಹಣಕಾಸು ಇಲಾಖೆಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಕರ್ನಾಟಕದಲ್ಲಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಸಾರಿಗೆ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ. ಕೆಎಸ್‍ಆರ್‍ಟಿಸಿ ಎರಡು ರೀತಿಯಲ್ಲಿ ಲಾಭದಾಯಕವಾಗಿದೆ. ಇದನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ಸಮಿತಿಯು ಅಧ್ಯಯನ ಮಾಡುತ್ತದೆ. ಸಮಿತಿಯು ಕೇರಳ ಸಾರಿಗೆ ಸಂಸ್ಥೆಯಲ್ಲಿ ಬದಲಾವಣೆಗಳನ್ನು ಮಾಡುವಂತೆ ಸೂಚಿಸಬಹುದಾಗಿದೆ.
ಪ್ರಸ್ತುತ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಎಸ್‍ಆರ್‍ಟಿಸಿ ರಾಜ್ಯ ಸರ್ಕಾರದ ಆರ್ಥಿಕ ನೆರವಿನಿಂದ ವೇತನ ವಿತರಣೆ ಸೇರಿದಂತೆ ತನ್ನ ಕಾರ್ಯಾಚರಣೆಯನ್ನು ಸಮರ್ಥವಾಗಿ ನಡೆಸುವಲ್ಲಿ ಕುಂಟುತ್ತಿದೆ. ವೇತನ ವಿಳಂಬದ ವಿರುದ್ಧ ನೌಕರರು ನ್ಯಾಯಾಲಯದ ಮೊರೆ ಹೋಗಿದ್ದರು. ಓಣಂ ಸಮಯದಲ್ಲಿ ಸರ್ಕಾರ ತುರ್ತು ನಿಧಿಯನ್ನು ಒದಗಿಸಿದ ನಂತರ ಎರಡು ತಿಂಗಳ ಸಂಬಳವನ್ನು ಪಾವತಿಸಲಾಯಿತು.
ಕರ್ನಾಟಕ ಸಾರಿಗೆ ಹೇಗೆ ಲಾಭದಾಯಕವಾಯಿತು? ಮಾದರಿಯನ್ನು ಅಧ್ಯಯನ ಮಾಡಲು ಕೇರಳ ಹಣಕಾಸು ಇಲಾಖೆಯಿಂದ ಸಿದ್ದತೆ
0
ಸೆಪ್ಟೆಂಬರ್ 15, 2022
Tags