ಖಜಾನೆಯಲ್ಲಿ ಹಣವಿಲ್ಲ; ಸರ್ಕಾರಿ ಶಾಲೆಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ: ಸಾಕಷ್ಟು ಎತ್ತರವಿಲ್ಲ ಎಂಬ ಕಾರಣಕ್ಕಾಗಿ ತರಗತಿ ಕೊಠಡಿಗಳಿಗೆ ಅನುಮತಿ ನಿರಾಕರಣೆ: ಜಟಿಲತೆಯತ್ತ ಶಿಕ್ಷಣ
0
ಸೆಪ್ಟೆಂಬರ್ 15, 2022
ಕೊಚ್ಚಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಹೆಚ್ಚುತ್ತಿದ್ದಾರೆ, ಶಿಕ್ಷಣ ಆಧುನಿಕವಾಗಿದೆ ಎಂದು ಬಿಂಬಿಸುವವರು ತೆರೆ ಮರೆಯಲ್ಲಿ ಮಾಡುತ್ತಿರುವ ಶಿಕ್ಷಣ ವಿರೋಧಿ ಚಟುವಟಿಕೆಗಳು ಬೆಳಕಿಗೆ ಬರುತ್ತಿವೆ.
ಸÀರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದ ಹಲವು ಶಾಲೆಗಳು, ಸುಮಾರು 300 ಶಿಕ್ಷಕರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದೆ. ಅಲ್ಲದೆ ಖಜಾನೆಯಲ್ಲಿ ಹಣವಿಲ್ಲದೇ ಉದ್ದೇಶಪೂರ್ವಕವಾಗಿ ಬಿಕ್ಕಟ್ಟು ಸೃಷ್ಟಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ರಾಜ್ಯದಲ್ಲಿ, ಸರ್ಕಾರಿ ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸುವುದರೊಂದಿಗೆ ಬಿಕ್ಕಟ್ಟು ಪ್ರಾರಂಭವಾಗುತ್ತದೆ. ಕೆಐಎಫ್ ಬಿ(ಕಿಪ್ಬಿ) ಹಣದಲ್ಲಿ ನಿರ್ಮಿಸಿರುವ ಸರ್ಕಾರಿ ಶಾಲಾ ಕಟ್ಟಡಗಳಲ್ಲಿನ ಕೊಠಡಿಗಳ ಎತ್ತರ 3.7 ಮೀಟರ್ ಗಿಂತ ಕಡಿಮೆ ಇರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಕೊಠಡಿಗಳ ಎತ್ತರವನ್ನು 3.7 ಮೀಟರ್ ಎಂದು ನಿಗದಿಪಡಿಸಿದ್ದರಿಂದ ಶಿಕ್ಷಣ ಇಲಾಖೆ ಈ ಎತ್ತರಕ್ಕಿಂತ ಕಡಿಮೆ ಕೊಠಡಿಗಳಿಗೆ ಅನುಮತಿ ನೀಡಿಲ್ಲ. ಮೂರು ಮತ್ತು ನಾಲ್ಕು ಸೆಂಟಿಮೀಟರ್‍ಗಳಿಗಿಂತ ಕಡಿಮೆಯಿದ್ದರೂ ಸಹ ಅನುಮತಿಸಲಾಗುವುದಿಲ್ಲ.
ತರಗತಿ ಕೊಠಡಿಗಳಿಗೆ ಅನುಮತಿ ಇಲ್ಲದ ಕಾರಣ ಹೊಸ ವಿಭಾಗಗಳಿಲ್ಲ. ಹೊಸ ವಿಭಾಗಗಳಿಲ್ಲದ ಕಾರಣ ಶಿಕ್ಷಕರ ನೇಮಕ ಸಾಧ್ಯವಿಲ್ಲ. ಪಿಎಸ್‍ಸಿ ರ್ಯಾಂಕ್ ಪಟ್ಟಿಯಲ್ಲಿ ಹೆಸರರಿರುವ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವುದು ವಿಳಂಬವಾಗುವುದು ಖಚಿತ. ಸರ್ಕಾರದ ನಿರ್ದೇಶನದಂತೆ ದಿನಗೂಲಿಯಲ್ಲಿ ಕೆಲಸ ಮಾಡುತ್ತಿದ್ದ ಮುಖ್ಯ ಶಿಕ್ಷಕರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ವಿಭಾಗ(ಡಿವಿಶನ್) ಇಲ್ಲದಿರುವುದರಿಂದ ಸರ್ಕಾರಿ ವೇತನದಲ್ಲಿ ಶಿಕ್ಷಕರನ್ನು ನೇಮಿಸುವಂತಿಲ್ಲ. ಇದರಿಂದ ಮಕ್ಕಳಿಗೆ ಕಲಿಸಲು ಶಿಕ್ಷಕರಿಲ್ಲದೇ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಪಿಟಿಎ ಹಣ ಸಂಗ್ರಹಿಸಿ ಅಲ್ಪ ವೇತನ ನೀಡಿ ತಾತ್ಕಾಲಿಕವಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಅರ್ಹ ಶಿಕ್ಷಕರ ಕೊರತೆ ಇದೆ.
ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಕಾರಣಕ್ಕೆ ವಿಭಾಗಗಳನ್ನು ನಿರಾಕರಿಸಲಾಗುತ್ತಿದೆ ಎಂಬ ಆರೋಪಗಳಿವೆ. ಸÀರ್ಕಾರಿ ಸಂಸ್ಥೆಗಳ ಕಣ್ಗಾವಲಿನಲ್ಲಿ ನಿರ್ಮಿಸಿರುವ ಶಾಲೆಗಳಲ್ಲಿನ ಕೊಠಡಿಗಳು ಎತ್ತರ ಕಡಿಮೆ ಇವೆ. ಮೊದಲು ಈ ವಿಷಯವನ್ನು ಆಯಾ ಶೈಕ್ಷಣಿಕ ಜಿಲ್ಲೆಗಳ ನಿರ್ದೇಶಕರು ಪರಿಹರಿಸಬೇಕಾಗಿದೆ. ಆದರೆ ಈಗ ಶಿಕ್ಷಣ ಇಲಾಖೆ ನಿರ್ದೇಶಕರಿಂದ ಮಾತ್ರ ಸಾಧ್ಯ. ಸುಲಭವಾಗಿ ಪರಿಹರಿಸಬಹುದಾದ ಸಮಸ್ಯೆಯನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಜಟಿಲಗೊಳಿಸುತ್ತಿದೆ ಎಂದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋೀಷಕರು ಆರೋಪಿಸಿದ್ದಾರೆ.
Tags