ಲಖನೌ: ಗುರುವಾರ ನಡೆದ ವಿಧಾನಸಭೆಯ ಮುಂಗಾರು ಅಧಿವೇಶನವನ್ನು ಸಂಪೂರ್ಣ ಮಹಿಳಾ ಸದಸ್ಯರಿಗಾಗಿಯೇ ಮೀಸಲಿಡುವುದರ ಮೂಲಕ ಉತ್ತರ ಪ್ರದೇಶದಲ್ಲಿ ಇತಿಹಾಸ ನಿರ್ಮಿಸಲಾಗಿದೆ.
ಅಧಿವೇಶನದಲ್ಲಿ ಕೇವಲ ಮಹಿಳಾ ಸದಸ್ಯರು ಮಾತ್ರವೇ ಮಾತನಾಡಿದರು.
ಇವರೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಮಾತುಗಳಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿತ್ತು.
ಒಟ್ಟಾರೆಯಾಗಿ ಮಹಿಳಾ ವಿಷಯದ ಕುರಿತು ಅಥವಾ ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಕುರಿತು ಮಹಿಳಾ ಸದಸ್ಯರು ಮಾತನಾಡಿದರು. ಕೆಲವರು ಕವಿತೆಗಳನ್ನೂ ವಾಚನ ಮಾಡಿದರು.
'ಈ ಕೆಲಸವನ್ನು ಬಹಳ ಹಿಂದೆಯೇ ಮಾಡಬೇಕಾಗಿತ್ತು. ಉತ್ತರ ಪ್ರದೇಶ ವಿಧಾನಸಭೆಯು ಇಂದು ಇತಿಹಾಸ ನಿರ್ಮಿಸಿದೆ. ವಿಧಾನಸಭೆಗಳಲ್ಲಿ ಮಹಿಳಾ ಸದಸ್ಯರಿಗೆ ಮಾತನಾಡಲೂ ಅವಕಾಶವನ್ನೇ ನೀಡಲಾಗುವುದಿಲ್ಲ. ಯಾವಾಗಲೂ ಪುರುಷ ಸದಸ್ಯರೇ ಅಧಿಪತ್ಯ ಸಾಧಿಸುತ್ತಾರೆ' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಮಾತನಾಡಿ, 'ಮಹಿಳೆಯ ಮೇಲಿನ ಅಪರಾಧ ಪ್ರಕರಣಗಳು ಏರಿಕೆ ಆಗುತ್ತಿವೆ. ಇದನ್ನು ನಿಯಂತ್ರಿಸಲು ಕಠಿಣ ಕಾನೂನು ತನ್ನಿ' ಎಂದರು.
403 ವಿಧಾನಸಭೆಯಲ್ಲಿರುವ ಒಟ್ಟು ಸದಸ್ಯರ ಸಂಖ್ಯೆ
47 ಮಹಿಳಾ ಸದಸ್ಯರ ಸಂಖ್ಯೆ