ಪೆರ್ಲ: ಮನುಷ್ಯರಾದವರು ಜೀವಪರ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಬಡವರ ಬಗ್ಗೆ ಕಾಳಜಿಯನ್ನು ಹೊಂದಿರಬೇಕು. ದೈನಂದಿನ ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸುವ ವ್ಯಕ್ತಿಗಳಿಗೆ ಸಾಂತ್ವನದ ಕರಸ್ಪರ್ಶವನ್ನು ನೀಡಿದಾಗ ಬದುಕು ತೃಪ್ತಿಕರವಾಗುತ್ತದೆ ಎಂದು ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ವಿಜಯಲಕ್ಷ್ಮೀ ಹೇಳಿದರು.
ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಎನ್. ಎಸ್. ಎಸ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಫ್ರೀಡಂ ವಾಲ್ ನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಆಯಿμÁ ಎ. ಎ ಅನಾವರಣಗೊಳಿಸಿದರು. ಬಡ ಕುಟುಂಬಗಳಿಗೆ ಸಹಾಯವನ್ನು ಮಾಡುವ ಉಪಜೀವನ ಯೋಜನೆಯನ್ನು ಆಂಗ್ಲ ಭಾμÁ ಶಿಕ್ಷಕ ಶಾಸ್ತ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಬಡ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಕೋಳಿಮರಿಗಳನ್ನು ನೀಡಲಾಯಿತು. ವಿದ್ಯಾರ್ಥಿಗಳು ತಾವೇ ಸಂಗ್ರಹಿಸಿದ ಹಣವನ್ನು ಕೇರಳ ಸರ್ಕಾರದ ವಿ ಕೇರ್ ಯೋಜನೆಗೆ ಸಮರ್ಪಿಸಿದರು. ಎನ್. ಎಸ್. ಎಸ್ ಯೋಜನಾಧಿಕಾರಿ ಸಂತೋμï ಕುಮಾರ್ ಕ್ರಾಸ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಡಾ. ಅನೀಶ್ ಕುಮಾರ್, ಡಾ. ಸುಭಾμï ಪಟ್ಟಾಜೆ, ತುμÁರ ವಿ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಫಾತಿಮತ್ ಸುಹ ಕಾರ್ಯಕ್ರಮವನ್ನು ನಿರೂಪಿಸಿದರು. ಎನ್. ಎಸ್. ಎಸ್. ಕಾರ್ಯದರ್ಶಿ ಜಿತೇಶ್ ಸ್ವಾಗತಿಸಿ, ಸಾಯಿ ಪ್ರಿಯ ವಂದಿಸಿದರು.