ಕೊಟ್ಟಾಯಂ: ಕೊಚ್ಚಿ ರಾಜವಂಶದ ವಂಶಸ್ಥರಾದ ಕೋಟ್ಟಯಂ ಕೋವಿಲಗಂ ರಾಜಭವನದಲ್ಲಿರುವ ಸೌಮ್ಯವತಿ ತಂಬುರಾಟಿಗೆ ವಾಡಿಕೆಯಂತೆ ಸಚಿವ ವಿ.ಎನ್.ವಾಸವನ್ ಅವರು ಉತ್ರಾಡಂ ಉಡುಗೊರೆ ಗೌರವ ಸಮರ್ಪಿಸಿದರು.
ಬೆಳ್ಳಿಯ ಬಟ್ಟಲಲ್ಲಿ 1001 ರೂ.ಗಳನ್ನು ಹಸ್ತಾಂತರಿಸಲಾಯಿತು. ಓಣಂ ಕೊಡಿಯನ್ನು ಸಹ ಸಚಿವರು ನೀಡಿದರು. ಉತ್ರಾಡ ಕೊಡುಗೆ ನೀಡಲು ಸಂಸ್ಕøತಿ ಸಚಿವ ವಿ.ಎನ್.ವಾಸವನ್ ಮತ್ತು ತಿರುವಂಜೂರು ರಾಧಾಕೃಷ್ಣನ್ ಶಾಸಕರು ಕೊಟ್ಟಾಯಂಗೆ ಆಗಮಿಸಿದರು. ಇವರೊಂದಿಗೆ ತಹಸೀಲ್ದಾರ್ ಅನಿಲ್ ಜೊಗೆಗಿದ್ದರು.
ಎಂಬತ್ತಮೂರು ವರ್ಷದ ಸೌಮ್ಯವತಿ ತಂಬುರಾಟಿ ಅವರು 74ನೇ ಬಾರಿಗೆ ಗೌರವ ಉಡುಗೊರೆ ಸ್ವೀಕರಿಸುತ್ತಿದ್ದಾರೆ. ಓಣಂ ಸಂದರ್ಭದಲ್ಲಿ ರಾಜಮನೆತನದ ಮಹಿಳಾ ಸದಸ್ಯರಿಗೆ ಕೊಚ್ಚಿಯ ರಾಜ ನೀಡಿದ ಉಡುಗೊರೆಯ ಪ್ರತೀಕ ಈ ಉತ್ರಾಡಂ ಕೊಡುಗೆ.
ಕೊಚ್ಚಿ ರಾಜವಂಶಸ್ಥರಾದ ರಾಜರಾಜ ವರ್ಮರ ಪತ್ನಿ ಸೌಮ್ಯಾವತಿ ತಂಬುರಾಟಿಗೆ ಉತ್ರಾಡಂ ಗೌರ ನೀಡಲಾಗುತ್ತದೆ. ಉಡುಗೊರೆಗಳೊಂದಿದಿಗೆ 1001 ರೂ. ರಾಜಧನ ಗೌರವ ಕಾಣಿಕೆ ನೀಡಲಾಗುತ್ತದೆ. ಈ ಹಿಂದೆ ಇದು 14 ಇದ್ದಿದ್ದು ಬಳಿಕ 1000ಕ್ಕೆ ಹೆಚ್ಚಿಸಲಾಯಿತು.
ಸಚಿವ ಪಿ.ರಾಜೀವ್ ಅವರು ಓಣಂ ನಿಮಿತ್ತ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ತ್ರಿಕಕ್ಕರ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿ ನೈವೇದ್ಯ ಅರ್ಪಿಸಲಾಯಿತು. ಸಚಿವರೊಂದಿಗೆ ಕಾಂಗ್ರೆಸ್ ಸಂಸದ ಬೆನ್ನಿ ಬಹನನ್ ಕೂಡ ಇದ್ದರು.
ಸಂಪ್ರದಾಯ ಮುಂದುವರಿಕೆ: ಸೌಮ್ಯವತಿ ತಂಬುರಾಟಿಗೆ ಉತ್ರಾಡಂ ಉಡುಗೊರೆ ಅರ್ಪಿಸಿದ ಸಚಿವ ವಿ.ಎನ್.ವಾಸವನ್
0
ಸೆಪ್ಟೆಂಬರ್ 08, 2022