ಮಂಜೇಶ್ವರ: ಬೆಜ್ಜ ಜಲಾನಯನ ಯೋಜನೆಯ ಆಶ್ರಯದಲ್ಲಿ ನಬಾರ್ಡ್ ನ ಸಹಕಾರದೊಂದಿಗೆ ಒಂದು ದಿನದ ಮೀನುಸಾಕಣೆಯ ಬಗ್ಗೆ ತರಬೇತಿಯು ಮಂಗಳೂರಿನ ಕೃಷಿವಿಜ್ಞಾನ ಕೇಂದ್ರದ ಮೀನುಗಾರಿಕಾ ಕಾಲೇಜಿನಲ್ಲಿ ಜರಗಿತು. ಮೀನುಗಾರಿಕಾ ಕಾಲೇಜಿನ ವಿಜ್ಞಾನಿಗಳಾದ ಡಾ. ಕೆ.ಜೆ ರಮೇಶ್ ಹಾಗೂ ಡಾ. ಚೇತನ್ ನಡೆಸಿಕೊಟ್ಟರು.
ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ಹೆಚ್ಚು ಭರವಸೆ ನೀಡಿತು. ಮಿಶ್ರ ತಳಿಯ ಮೀನುಸಾಕಣೆಯು ಲಾಭದಾಯಕವೆಂದು ತರಬೇತುದಾರರಿಗೆ ಮನವರಿಕೆಯಾಯಿತು. ಸಮಾರಂಭದ ಉದ್ಘಾಟನೆಯನ್ನು ಡಾ. ಕೆ ಜೆ ರಮೇಶ್ ನೆರವೇರಿಸಿದರು. ಯೋಜನೆಯ ಬಗ್ಗೆ ಕಾರ್ಯದರ್ಶಿ ಟಿ.ಡಿ.ಸದಾಶಿವ ರಾವ್ ರವರು ತಿಳಸಿದರು. ಸಮಿತಿಯ ಸದಸ್ಯ ಪುಷ್ಪರಾಜ ಶೆಟ್ಟಿ ವಂದಿಸಿದರು. ಕೃಷಿ ವಿಜ್ಞಾನ ಕೇಂದ್ರದ ಸಿಬಂದಿವರ್ಗದ ಸಹಕಾರವನ್ನು ಜಲಾನಯನ ಸಮಿತಿ ಶ್ಲಾಘಿಸಿತು.
ಮೀನುಗಾರಕೆ ತರಬೇತಿ
0
ಸೆಪ್ಟೆಂಬರ್ 03, 2022