ಪೆರ್ಲ:ಅಂಗನವಾಡಿಗಳ ಪೋಷಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಅಂಗವಾಗಿ "ಪೋಷÀಣ್ ಮಾ" ಮಾಸಾಚರಣೆಯ ಎಣ್ಮಕಜೆ ಗ್ರಾಮ ಪಂಚಾಯತಿ ಮಟ್ಟದ ಉದ್ಘಾಟನೆ ಮಂಗಳವಾರ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್.ಉದ್ಘಾಟಿಸಿದರು. ಉಪಾಧ್ಯಕ್ಷೆ ಡಾ.ಜಹನಾಸ್ ಹಂಸಾರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌದಾಭಿ ಹನೀಫ್, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್, ಮಂಜೇಶ್ವರ ಆಡಿಶನಲ್ ಸಿಡಿಪಿಒ ಲೀನಾ ಕೊಟ್ಟಾಯಿ, ಐಸಿಡಿಸಿ ಮೇಲ್ವಿಚಾರಕಿ ಪ್ರೇಮಲತಾ ಡಿ, ಪಂ.ನ ವಿವಿಧ ವಾರ್ಡ್ ಸದಸ್ಯರು , ಅಂಗನವಾಡಿ ಕಾರ್ಯಕರ್ತೆಯರು, ಕುಟುಂಬಶ್ರೀ ಸದಸ್ಯರು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ನ್ಯೂಟ್ರಿಮಿಕ್ಸ್ ಹಾಗೂ ಪೂರಕ ಆಹಾರ ವಸ್ತು ಬಳಸಿ ತಯಾರಿಸಿದ ವಿವಿಧ ಖಾದ್ಯಗಳ ಪ್ರದರ್ಶನ ನಡೆಯಿತು.