ಪೂರ್ಣಿಯಾ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿಯಾಗುವ ಆಸೆಯಿಂದ ಬಿಜೆಪಿಯ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರಿದರು.
ಬಿಹಾರದ ಪೂರ್ಣಿಯಾದಲ್ಲಿ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ನಿತೀಶ್ ಅವರು 2014ರಲ್ಲಿಯೂ ಹೀಗೆಯೇ ಮಾಡಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಜನತೆ 'ಮಹಾ ಮೈತ್ರಿ'ಗೆ ತಕ್ಕ ಪಾಠ ಕಲಿಸಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯಲಿದ್ದು, ಸರ್ಕಾರ ರಚಿಸಲಿದೆ ಎಂದು ಶಾ ಹೇಳಿರುವುದಾಗಿ 'ಪಿಟಿಐ' ಸುದ್ದಿ ಸಂಸ್ಥೆ ವರದಿ ಮಾಡಿದೆ.
'ಸ್ವಾರ್ಥ ಮತ್ತು ಅಧಿಕಾರದ ರಾಜಕಾರಣಕ್ಕೆ ಬದಲಾಗಿ ನಾವು ಸೇವೆ ಮತ್ತು ಅಭಿವೃದ್ಧಿಯ ರಾಜಕಾರಣದಲ್ಲಿ ನಂಬಿಕೆ ಇರಿಸಿದ್ದೇವೆ' ಎಂದು ಅವರು ಹೇಳಿದರು.
'ಲಾಲು ಮಡಿಲಲ್ಲಿ ಕುಳಿತವರಿಗೆ ಜನರಿಂದ ಪಾಠ'
'ಬಿಜೆಪಿಯ ಬೆನ್ನಿಗೆ ಚೂರಿ ಹಾಕಿರುವ ನಿತೀಶ್ ಕುಮಾರ್ ಈಗ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಮಡಿಲಲ್ಲಿ ಕುಳಿತಿದ್ದಾರೆ. ರಾಜ್ಯದ ಜನತೆ ಅವರಿಗೆ ತಕ್ಕ ಉತ್ತರ ನೀಡಲಿದೆ' ಎಂದು ಶಾ ಹೇಳಿದರು.
ಸ್ವಾರ್ಥ ಮತ್ತು ಅಧಿಕಾರದ ರಾಜಕಾರಣಕ್ಕೆ ಬದಲಾಗಿ ನಾವು ಸೇವೆ ಮತ್ತು ಅಭಿವೃದ್ಧಿಯ ರಾಜಕಾರಣದಲ್ಲಿ ನಂಬಿಕೆ ಇರಿಸಿದ್ದೇವೆ' ಎಂದು ಅವರು ಹೇಳಿದರು.
'ಲಾಲು ಮಡಿಲಲ್ಲಿ ಕುಳಿತವರಿಗೆ ಜನರಿಂದ ಪಾಠ'
'ಬಿಜೆಪಿಯ ಬೆನ್ನಿಗೆ ಚೂರಿ ಹಾಕಿರುವ ನಿತೀಶ್ ಕುಮಾರ್ ಈಗ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಮಡಿಲಲ್ಲಿ ಕುಳಿತಿದ್ದಾರೆ. ರಾಜ್ಯದ ಜನತೆ ಅವರಿಗೆ ತಕ್ಕ ಉತ್ತರ ನೀಡಲಿದೆ' ಎಂದು ಶಾ ಹೇಳಿದರು.
नीतीश जी, लालू जी की गोद में बैठ गए हैं।