ಮಂಜೇಶ್ವರ: ತಲೇಕಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ದಿ ಸಮಿತಿಯ ಕೋರಿಕೆ ಮೇರೆಗೆ ಕರ್ನಾಟಕ ಬ್ಯಾಂಕ್ ಮಂಗಳೂರು ಇವರು ಉದಾರವಾಗಿ ನೀಡಿದ ವಾಹನ ಹಸ್ತಾಂತರ ಕಾರ್ಯಕ್ರಮವು ತಲೇಕಳ ಶಾಲಾ ವಠಾರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕಿನ ಪ್ರಧಾನ ಪ್ರಬಂಧಕ ವಿನಯ್ ಭಟ್ ವಾಹನದ ಕೀಲಿ ಕೈಯನ್ನು ಶಾಲಾ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಿದರು. ತಲೇಕಳ ಶಾಲಾ ರಸ್ತೆಗೆ ಡಾಮರಿಕರಣ ಮಾಡಿಸುವುದಾಗಿ ಶಾಸಕರು ಈ ಸಂದರ್ಭ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಶೆಟ್ಟಿ, ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ, ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ಭಟ್, ಅಶ್ವಿನಿ ಎಮ್.ಎಲ್, ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಸರಸ್ವತಿ, ಗ್ರಾಮ ಪಂಚಾಯತಿ ಸದಸ್ಯೆ ಜ್ಯೋತಿ ಪಿ ರೈ, ಸೂರ್ಯನಾರಾಯಣ ಮಯ್ಯ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನೂತನ ವಾಹನಕ್ಕಾಗಿ ಶ್ರಮಿಸಿದ ಸೂರ್ಯನಾರಾಯಣ ಮಯ್ಯ ಅವರನ್ನು ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು. ಸಭೆಯಲ್ಲಿ ಶಾಲಾ ಪಿ ಟಿ ಎ ಅಧ್ಯಕ್ಷ ಅಬ್ದುಲ್ ರಹಿಮಾನ್, ಮೀಯಪದವು ಎ ಯು ಪಿ ಶಾಲಾ ಪ್ರಬಂಧಕ ಶ್ರೀಧರ ರಾವ್ ಆರ್.ಎಮ್, ತೋಟ್ಟೆತ್ತೋಡಿ ಶಾಲಾ ನಿವೃತ್ತ ಮುಖ್ಯ್ಯೊಪಾಧ್ಯಾಯ ಟಿ.ಡಿ ಸದಾಶಿವ ರಾವ್, ವಿಜಯಾ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ ತಲೇಕಳ ಬಾಲಕೃಷ್ಣ ರೈ, ಕರ್ನಾಟಕ ಬ್ಯಾಂಕ್ ಮೀಯಪದವು ಶಾಖಾ ಪ್ರಬಂಧಕ ಉಲ್ಲಾಸ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಗೋಪಣ್ಣ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾನಂದ ಶೆಟ್ಟಿ ಸ್ವಾಗತಿಸಿ, ಪುಷ್ಪರಾಜ್ ಶೆಟ್ಟಿ ವಂದಿಸಿದರು. ಶಾಲಾ ಅಧ್ಯಾಪಕ ರೂಪೇಶ್ ನಿರೂಪಿಸಿದರು.