ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾಗಿ , ಅಧ್ಯಾಪಕರಾಗಿ ಮೀಂಜ ಪ್ರದೇಶದ ವಿದ್ಯಾಭ್ಯಾಸ ಕ್ಷೇತ್ರದ ಧ್ರುವತಾರೆಯೆನಿಸಿಕೊಂಡಿದ್ದ ದಿ. ಯಂ ರಾಮಕೃಷ್ಣ ರಾವ್ ಅವರ 17ನೇ ಪುಣ್ಯತಿಥಿಯ ಸಂದರ್ಭ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ ಶಾಲಾ ರಂಗಮಂಟಪದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್.ವಿ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೆರ್ಲದ ನಾಲಂದ ವಿದ್ಯಾಲಯದ ಪ್ರಾಚಾರ್ಯ ಡಾ.ಕಿಶೋರ್ ಕುಮಾರ್ ರೈ ಶೇಣಿ ಮಾತನಾಡಿ, ಸಾಧನೆ ಮತ್ತು ಕಳಂಕ ಇಲ್ಲದ ಮನಸ್ಸಿನ ವ್ಯಕ್ತಿ ಯಾವಾಗಲೂ ಎತ್ತರಕ್ಕೆ ಏರಬಲ್ಲ ಎಂಬುದಕ್ಕೆ ರಾಮಕೃಷ್ಣ ರಾವ್ ಇವರೇ ಸಾಕ್ಷಿ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ರವೀಂದ್ರ ಮುನ್ನಿಪ್ಪಾಡಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಾಲಾ ಅಧ್ಯಾಪಕ ನಾರಾಯಣ ನಾವಡ ನಿರ್ದೇಶನದ ಶಿವಾನುಗ್ರಹ ಎಂಬ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ತಾಳ ಮದ್ದಳೆ ಜರಗಿತು.ಕಾರ್ಯಕ್ರಮವನ್ನು ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಯ ಅರವಿಂದಾಕ್ಷ ಭಂಡಾರಿ ವಂದಿಸಿದರು. ಅಧ್ಯಾಪಕ ರಾಮಚಂದ್ರ.ಕೆ.ಎಂ ನಿರೂಪಿಸಿದರು.
ದಿ.ಯಂ ರಾಮಕೃಷ್ಣ ರಾವ್ ಸಂಸ್ಮರಣೆ: ಸಾಧನೆ ಮತ್ತು ಕಳಂಕ ರಹಿತ ವ್ಯಕ್ತಿ ಯಾವಾಗಲೂ ಎತ್ತರಕ್ಕೆ ಏರಬಲ್ಲ: ಡಾ.ಕಿಶೋರ್ ರೈ ಶೇಣಿ
0
ಸೆಪ್ಟೆಂಬರ್ 25, 2022
Tags