ಕುಂಬಳೆ: ಕುಂಬಳೆಯಲ್ಲಿ ನಡೆದ ಗಣೇಶೋತ್ಸವ ವಿಗ್ರಹ ವಿಸರ್ಜನಾ ಮೆರವಣಿಗೆ ಈ ಬಾರಿ ವಿಭಿನ್ನವಾಗಿ ಗಮನಾರ್ಹವಾಯಿತು. ಕಾರಣ ಮೆರವಣಿಗೆಯಲ್ಲಿ ಮಾಪ್ಪಿಳ್ಳೆ ಹಾಡುಗಳು ಕೇಳಿಬಂದು ನೂತನ ಸೌಹಾರ್ಧತೆಗೆ ಕಾರಣವಾಗಿರುವುದು. ಐದು ಗಂಟೆಗಳ ಕಾಲ ನಡೆದ ವಿಸ್ಕøತ ಮೆರವಣಿಗೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆರವಣಿಗೆಯಲ್ಲಿ ಸುಮಾರು 10 ಮಾಪ್ಪಿಳ್ಳೆ ಹಾಡುಗಳ ಶೈಲಿಯಲ್ಲಿ ಹಾಡಲಾಯಿತು. ಗಣೇಶೋತ್ಸವ ಸಮಿತಿ ಅನುಮತಿ ಎಷ್ಟರ ಮಟ್ಟಿಗೆ ಇತ್ತೆಂದು ಸ್ಪಷ್ಟಗೊಂಡಿಲ್ಲ. ಸಾರ್ವಜನಿಕ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಳಿ ಬಂದ ಮಾಪಿಳ್ಳೆ ಹಾಡುಗಳು ಜನರಲ್ಲಿ ಕುತೂಹಲ ಮೂಡಿಸಿದವು.
‘ಪೆÇನ್ನು ಸಖಿ ಒರುಕುಲ ವಿನಯಿ, ಖಾಫ್ ಮಲ ಕಂಡ ಪೂಂಕಟೆ, ಮಾಣಿಕ್ಯ ಮಲರಾಯ ಪೂವೆ, ಬದರುಲ್ ಹುದಾ ಯಾಸೀನ್’ ಮುಂತಾದ ಗೀತೆಗಳನ್ನು ಮೆರವಣಿಗೆಯಲ್ಲಿ ಹಾಡಲಾಯಿತು ಮತ್ತು ನೆರೆದಿದ್ದವರು ಕೂಡ ಕುಣಿದು ಕುಪ್ಪಳಿಸಿದರು. ಒಂದು ಕಾಲದಲ್ಲಿ ಸೌಹಾರ್ಧತೆಯ ನೆಲೆವೀಡಾಗಿದ್ದ ಕುಂಬಳೆ ಬಳಿಕ ಕಳೆದ ಎರಡು-ಮೂರು ದಶಕಗಳಿಂದ ಕೋಮುಗಲಭೆ ತಾಂಡವವಾಡುತ್ತಿದ್ದ ಕಾಸರಗೋಡು ಜಿಲ್ಲೆಯ ಉತ್ತರ ಭಾಗದಲ್ಲಿ ಶಾಂತಿಯ ಬಿಳಿ ಪಾರಿವಾಳಗಳ ನಿರಾಳತೆ ಕಂಡು ಬರುತ್ತಿದೆ. ಕುಂಬಳೆ ಪೋಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳು ಒಂದು ಕಾಲದಲ್ಲಿ ಕೋಮುಗಲಭೆಯ ಕೇಂದ್ರವಾಗಿತ್ತು.
ಧಾರ್ಮಿಕ ಸೌಹಾರ್ದತೆಯನ್ನು ಗಟ್ಟಿಗೊಳಿಸಲು ಸ್ವತಃ ಸಂಘಪರಿವಾರದ ಸಂಘಟನೆಯೇ ಮಾಪಿಳ್ಳ ಪಾಟುಗಳ ಆಯೋಜನೆಗೆ ಮುಂದಾಗಿದ್ದು, ಜನರಲ್ಲಿ ಹೊಸ ಭರವಸೆ ಮೂಡಿಸಿದೆ ಎಂಬ ಮಾತುಗಳು ಕೇಳಿಬಂದಿದೆ. ಇದೇ ವೇಳೆ ಕುಂಬಳೆಯಲ್ಲಿ ಮೆರವಣಿಗೆ ಯಶಸ್ವಿಯಾಗಿದ್ದರೆ, ಪಾಲಕ್ಕಾಡ್ ಚಿತ್ತೂರಿನಲ್ಲಿ ಸಿಪಿಎಂ ನೇತೃತ್ವದ ಗಣೇಶೋತ್ಸವ ಹಾಗೂ ವಿಸರ್ಜಆ ಮೆರವಣಿಗೆ ವಿವಾದಕ್ಕೆ ಒಳಗಾಗಿಯಿತು. ಅಲ್ಲಿ ಸಿಪಿಎಂ ನಾಯಕರು ಆಯೋಜಿಸಿದ್ದ ಗಣೇಶ ಹಬ್ಬದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒ.ಎಸ್.ಎಫ್ ಎಂಬ ಸ್ಥಳೀಯ ಸಂಘಟನೆ ಈ ವಿಶೇಷ ಮಾಪಿಳ್ಳೆ ಪ್ಪಾಟ್ ಶೈಲಿಯ ಟೇಬ್ಲೋ ಆಯೋಜಿಸಿತ್ತು.
ಅಭಿಮತ:
ಗಣೇಶೋತ್ಸವ ಸಮಾರೋಪ ಮೆರವಣಿಗೆಯಲ್ಲಿ ವಿವಿಧ ತಂಡಗಳು ಟೇಬ್ಲೋಗಳನ್ನು ಆಯೋಜಿಸುವುದು. ಸಹಜ. ಈ ಹಿನ್ನೆಲೆಯಲ್ಲಿ ಒಎಸ್ ಎಫ್ ಎಂಬ ಸಂಘಟನೆ ಅನುಮತಿ ಕೇಳಿತ್ತು. ಜಾನಪದ ಶೈಲಿ(ನಾಡನ್ ಪಾಟ್ಟ್)ಯ ಹಾಡುಗಳಿರಲಿವೆ ಎಂದಷ್ಟೇ ಆ ಸಂಘಟನೆ ಅನುಮತಿ ಕೇಳಿಕೆ ಪತ್ರದಲ್ಲಿ ತಿಳಿಸಿತ್ತು. ಆದರೆ ಅವರು ಮಾಪಿಳ್ಳೆ ಶೈಲಿಯಲ್ಲಿ ಜಾನಪದ ಗೀತೆ ಹಾಡಿರುವರೆಂಬ ಮಾಹಿತಿ ಲಭಿಸಿದೆ.
-ದಯಾನಂದ ರಾವ್.
ಗಣೇಶೋತ್ಸವ ಸಮಿತಿ ಹಿರಿಯ ಸದಸ್ಯ.