ಮಲಪ್ಪುರಂ: ಶಾಸಕ ಕೆ.ಟಿ.ಜಲೀಲ್ ಮಾಡಿರುವ ಮತ್ತೊಂದು ಭಾಷಣ ಎಡ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರಕಾರದ ಸವಲತ್ತುಗಳನ್ನು ಪಡೆದು ದಲಿತ ಸಮುದಾಯಗಳು ಮುನ್ನಡೆಯಲು ಸಾಧ್ಯವಿಲ್ಲ ಎಂದು ಜಲೀಲ್ ಹೇಳಿರುವ ಭಾಷಣ ವಿವಾದ ಸೃಷ್ಟಿಸಿದೆ.
ಮಲಪ್ಪುರಂ ವಟ್ಟಂಕುಳಂ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಜನಪ್ರಿಯ ಓಣಂಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು dಈ ರೀತಿಯ ಭಾಷಣ ಮಾಡಿದ್ದಾರೆ.
ಎಸ್.ಸಿ./ಎಸ್.ಸಿ ವಿಭಾಗಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಂದ ಪಡೆದ ಕನಿಷ್ಠ ಪ್ರಯೋಜನಗಳ ಮೂಲಕ ಮುಂದುವರಿಯಲು ಸಾಧ್ಯವಿಲ್ಲ.ಪ್ರತಿಯೊಬ್ಬ ವ್ಯಕ್ತಿಯ ಪ್ರಗತಿಯು ಆರ್ಥಿಕ ಸಾಮಥ್ರ್ಯದ ಮೇಲೆ ಆಧಾರಿತವಾಗಿದೆ. ದಲಿತರು ಹೊರ ರಾಜ್ಯಗಳಿಗೆ ಹೋಗಿ ದುಡಿದು ಶ್ರೀಮಂತರಾಗಬೇಕು ಎಂಬುದು ಜಲೀಲ್ ಅವರ ಮಾತು.
ಜಲೀಲ್ ಆಜಾದ್ ಕಾಶ್ಮೀರ ಬಗೆಗಿನ ವಿವಾದಾತ್ಮಕ ಭಾಷಣದ ಬೆನ್ನಿಗೇ ಮತ್ತೊಂದು ಭಾಷಣ ಮತ್ತೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಾಶ್ಮೀರ ಭಾರತಕ್ಕೆ ಸೇರಿದ್ದು ಮತ್ತು ಕಾಶ್ಮೀರದ ಒಂದು ಭಾಗ ಪಾಕ್ ಆಕ್ರಮಿತ ಕಾಶ್ಮೀರ ಎಂದು ಈ ಹಿಂದೆ ಪೇಸ್ ಬುಕ್ ಮೂಲಕ ವಿವಾದದ ಬರಹ ಬರೆದಿದ್ದರು. ಇದಲ್ಲದೇ ಕಾಶ್ಮೀರವನ್ನು ಭಾರತೀಯ ಆಕ್ರಮಿತ ಕಾಶ್ಮೀರ ಎಂದೂ ಜಲೀಲ್ ಬಣ್ಣಿಸಿದ್ದಾರೆ. ಘಟನೆಯಲ್ಲಿ ಜಲೀಲ್ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.
ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ; ದಲಿತ ಗುಂಪುಗಳು ಹೊರ ರಾಜ್ಯಗಳಿಗೆ ಹೋಗಿ ದುಡಿದು ಶ್ರೀಮಂತರಾಗಬೇಕು: ಮತ್ತೆ i,ಸರ್ಕಾರವನ್ನು ಬಲೆಯಲ್ಲಿ ಸಿಲುಕಿಸಿದ ಕೆ.ಟಿ.ಜಲೀಲ್ ಭಾಷಣ
0
ಸೆಪ್ಟೆಂಬರ್ 03, 2022
Tags