ನವದೆಹಲಿ: ಭಾರತದ ಮೊದಲ ಮಾನ ಸಹಿತ ಬಾಹ್ಯಾಕಾಶ ಮಿಷನ್ ಗಗನ್ ಯಾನ್ 2024 ರಲ್ಲಿ ಉಡಾವಣೆಯಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಸಚಿವರು, ಸರ್ಕಾರ ಮಾನವ ಸಹಿತ ಬಾಹ್ಯಾಕಾಶ ಮಿಷನ್ ನ್ನು ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ವರ್ಷದಲ್ಲೇ ಉಡವಣೆ ಮಾಡಬೇಕೆಂದುಕೊಂಡಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಅದು ಮುಂದೂಡಲ್ಪಟ್ಟಿತು ಎಂದು ಹೇಳಿದ್ದಾರೆ.
ಕೋವಿಡ್-19 ಪ್ಯಾಂಡಮಿಕ್ ರಷ್ಯಾದಲ್ಲಿ ಹಾಗೂ ಭಾರತದಲ್ಲಿ ಗಗನಯಾತ್ರಿಗಳಿಗೆ ನೀಡಬೇಕಿದ್ದ ತರಬೇತಿ ಮೇಲೆ ಪರಿಣಾಮ ಬೀರಿತು. ಈ ವರ್ಷ ಗಗನ್ ಯಾನ್ ಮಿಷನ್ ನ ಮೊದಲ ಪರೀಕ್ಷಾರ್ಥ ಪರೀಕ್ಷೆ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.
ಮೊದಲು ಲೇಡಿ ರೋಬೋಟ್ ನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳಿಸಲಾಗುತ್ತದೆ. 'ವ್ಯೋಮಮಿತ್ರ' ಎಂಬ ಹೆಸರನ್ನು ಈ ರೋಬೋಟ್ ಗೆ ಇಡಲಾಗಿದೆ.
ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಐಎಎಫ್ ನಾಲ್ವರು ಪೈಲಟ್ ಗಳನ್ನು ಗುರುತಿಸಿದೆ. ಸಿಬ್ಬಂದಿಗಳು ಈಗಾಗಲೇ ಪ್ರಾಥಮಿಕ ತರಬೇತಿಯನ್ನು ರಷ್ಯಾದಲ್ಲಿ ಪಡೆದಿದ್ದಾರೆ. 2024 ಕ್ಕೆ ಇಸ್ರೋ ಕನಿಷ್ಟ ಇಬ್ಬರು ಗಗನ ಯಾತ್ರಿಗಳನ್ನು ಭೂಮಿಯ ಕೆಳಕಕ್ಷೆಗೆ ಕಳಿಸಲಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.